alex Certify ಬೆಚ್ಚಿಬೀಳಿಸುವಂತಿದೆ 2021ರಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಸಂಖ್ಯೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ 2021ರಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಸಂಖ್ಯೆ…!

ಏಪ್ರಿಲ್ 1, 2020 ರಿಂದ ಒಟ್ಟು 1,47,492 ಮಕ್ಕಳು ಕೊರೋನಾ ಮತ್ತು ಇತರ ಕಾರಣಗಳಿಂದ ತಮ್ಮ ತಾಯಿ ಅಥವಾ ತಂದೆ ಅಥವಾ ಇಬ್ಬರೂ ಪೋಷಕರನ್ನು ಕಳೆದುಕೊಂಡಿದ್ದಾರೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ (NCPCR) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಪೋಷಕರ ನಷ್ಟದಿಂದಾಗಿ ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳ ಕುರಿತು ಸುಮೋಟೊ ದಾಖಲಿಸಿಕೊಳ್ಳಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ NCPCR ಈ ವಿವರ ನೀಡಿದೆ. 2022ರ ಜನವರಿ 11ರವರೆಗೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತನ್ನ ‘ಬಾಲ್ ಸ್ವರಾಜ್ ಪೋರ್ಟಲ್-ನಲ್ಲಿ ಅಪ್‌ಲೋಡ್ ಮಾಡಿದ ಡೇಟಾವನ್ನು ಆಧರಿಸಿ ಈ ಅಂಕಿ ಅಂಶಗಳನ್ನ ನೀಡಲಾಗಿದೆ.‌

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ‘ಬಾಲ್ ಸ್ವರಾಜ್ ಪೋರ್ಟಲ್-ಕೋವಿಡ್ ಕೇರ್’ ನಲ್ಲಿ ಅಪ್‌ ಲೋಡ್ ಮಾಡಲಾದ ಮಕ್ಕಳ ಡೇಟಾವು ಎರಡೂ ವರ್ಗದ ಮಕ್ಕಳನ್ನು ಒಳಗೊಂಡಿದೆ. ಮಗು ಕೊರೋನಾ ರೋಗಕ್ಕೆ ಇಬ್ಬರನ್ನೂ ಅಥವಾ ಪೋಷಕರಲ್ಲಿ ಒಬ್ಬರನ್ನು ಕಳೆದುಕೊಂಡಿದೆ ಎಂದು, ವಕೀಲೆ ಸ್ವರೂಪಮಾ ಚತುರ್ವೇದಿ ಮೂಲಕ ಸಲ್ಲಿಸಿದ ಅಫಿಡವಿಟ್ ಹೇಳಿದೆ. ಜನವರಿ 11 ರವರೆಗೆ ಅಪ್ಲೋಡ್ ಮಾಡಲಾದ ಡೇಟಾದ ಪ್ರಕಾರ 10,094 ಅನಾಥ ಮಕ್ಕಳು, ಪೋಷಕರನ್ನು ಕಳೆದುಕೊಂಡ 1,36,910 ಮಕ್ಕಳು ಮತ್ತು ಪೋಷಕರೆ ಕೈಬಿಟ್ಟಿರುವ 488 ಮಕ್ಕಳು ಸೇರಿದಂತೆ ಒಟ್ಟು 1,47,492 ಜನ ಮಕ್ಕಳ ಸ್ಥಿತಿಯನ್ನ ಆಯೋಗ, ಸುಪ್ರೀಂ ಕೋರ್ಟ್ ಗೆ ತೋರಿಸಿದೆ.

ಲಿಂಗವಾರು ನೋಡುವುದಾದರೆ 1,47,492 ಮಕ್ಕಳಲ್ಲಿ 76,508 ಹುಡುಗರು, 70,980 ಹುಡುಗಿಯರು ಮತ್ತು ನಾಲ್ವರು ತೃತೀಯಲಿಂಗಿಗಳಿದ್ದಾರೆ. ಗರಿಷ್ಠ ಸಂಖ್ಯೆಯ ಮಕ್ಕಳು ಎಂಟರಿಂದ 13 ವರ್ಷ ವಯಸ್ಸಿನವರು (59,010), ನಂತರ 14 ರಿಂದ 15 ವರ್ಷ ವಯಸ್ಸಿನ ಮಕ್ಕಳು (22,763) ಮತ್ತು 16 ರಿಂದ 18 ವರ್ಷ ವಯಸ್ಸಿನವರು (22,626) ಮತ್ತು 4 ರಿಂದ 7 ವರ್ಷದೊಳಗಿನ ಮಕ್ಕಳು (26,080).

ಮಕ್ಕಳ ಆಶ್ರಯದ ಪ್ರಸ್ತುತ ಸ್ಥಿತಿಯನ್ನು ಸಹ ಆಯೋಗ ನೀಡಿದ್ದು, ಗರಿಷ್ಠ ಮಕ್ಕಳು ತಮ್ಮ ಒಂಟಿ ಪೋಷಕರೊಂದಿಗಿದ್ದಾರೆ. ಅಂದರೆ 1,25,205 ಜನ ಮಕ್ಕಳು.‌ ಅದರಲ್ಲಿ 11,272 ಮಕ್ಕಳು ಕುಟುಂಬದ ಸದಸ್ಯರೊಂದಿಗೆ ಇದ್ದಾರೆ, ನಂತರ 8,450 ರಕ್ಷಕರೊಂದಿಗಿದ್ದಾರೆ. 1,529 ಮಕ್ಕಳು ಚಿಲ್ದ್ರನ್ಸ್ ಹೋಮ್ ನಲ್ಲಿದ್ದಾರೆ, 19 ಮಕ್ಕಳು ತೆರೆದ ಆಶ್ರಯ ಮನೆಗಳಲ್ಲಿ, ಇಬ್ಬರು ವೀಕ್ಷಣಾ ಗೃಹಗಳಲ್ಲಿ, 188 ಮಕ್ಕಳು ಅನಾಥಾಶ್ರಮಗಳಲ್ಲಿ, 66 ಮಕ್ಕಳು ವಿಶೇಷ ದತ್ತು ಸಂಸ್ಥೆಗಳಲ್ಲಿ ಮತ್ತು 39 ಮಕ್ಕಳು ಹಾಸ್ಟೆಲ್‌ಗಳಲ್ಲಿದ್ದಾರೆ ಎಂದು ಆಯೋಗದ ವರದಿ ಹೇಳಿದೆ‌.

ಏಪ್ರಿಲ್ 2020 ರಿಂದ ಕೋವಿಡ್ ಮತ್ತು ಇತರ ಕಾರಣಗಳಿಗಾಗಿ ತಮ್ಮ ತಾಯಿ ಅಥವಾ ತಂದೆ ಅಥವಾ ಪೋಷಕರಿಬ್ಬರನ್ನೂ ಕಳೆದುಕೊಂಡ ಮಕ್ಕಳ ರಾಜ್ಯವಾರು ವಿವರಗಳನ್ನು ಆಯೋಗ ನೀಡಿದ್ದು, ಪೋಷಕರನ್ನ ಕಳೆದುಕೊಂಡ ಮಕ್ಕಳ ಗರಿಷ್ಠ ಸಂಖ್ಯೆ ಒಡಿಶಾದಲ್ಲಿದೆ (24,405), ನಂತರ ಮಹಾರಾಷ್ಟ್ರ (19,623), ಗುಜರಾತ್ (14,770), ತಮಿಳುನಾಡು (11,014), ಉತ್ತರ ಪ್ರದೇಶ (9,247), ಆಂಧ್ರ ಪ್ರದೇಶ (8,760), ಮಧ್ಯಪ್ರದೇಶ (7,340), ಪಶ್ಚಿಮ ಬಂಗಾಳ (6,835) ದೆಹಲಿ (6,629) ಮತ್ತು ರಾಜಸ್ಥಾನ (6,827).

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...