ಚಿಕ್ಕೋಡಿ : ವಕೀಲರೊಬ್ಬರ ಕಿರುಕುಳಕ್ಕೆ ಬೇಸತ್ತು ಫೇಸ್ಬುಕ್ ಲೈವ್ ನಲ್ಲೇ ನೌಕರನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ.
ಹಾಲಪ್ಪ ಸುರಾಣಿ ಎಂಬ ಹೊರಗುತ್ತಿಗೆ ನೌಕರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದಾನೆ. ಹಾಗೆಯೇ ಪತಿ ವಿಷ ಸೇವಿಸಿದ್ದನ್ನು ಕಂಡ ಪತ್ನಿ ಮಹಾದೇವಿ ಸುರಾಣಿ ಕೂಡ ವಿಷ ಸೇವಿಸಿದ್ದಾರೆ. ಸದ್ಯ ಇಬ್ಬರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾಲಪ್ಪ ಸುರಾಣಿ ರಾಯಬಾಗ ತಹಶಿಲ್ದಾರ ಕಚೇರಿಯ ಭೂ ದಾಖಲಾತಿ ವಿಭಾಗದಲ್ಲಿ ಹೊರಗುತ್ತಿಗೆ ಆದಾರದ ಮೇಲೆ ಕೆಲಸ ಮಾಡುತ್ತಿರುತ್ತಾರೆ, ಆಗ ಇವರಿಗೆ ವಕೀಲರೊಬ್ಬರು ಪರಿಚಯ ಆಗುತ್ತಾರೆ. ನಂತರ ಭೂ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ವಕೀಲ ಹಾಗೂ ಹಾಲಪ್ಪ ಸುರಾಣಿ ಇಬ್ಬರ ನಡುವೆ ಮನಸ್ತಾಪ ಉಂಟಾಗುತ್ತದೆ. ಈ ವಿಚಾರಕ್ಕೆ ವಕೀಲ ಹಣ ನೀಡುವಂತೆ ಕಿರುಕುಳ ನೀಡಿದ್ದಾನೆ ಎಂದು ನೌಕರ ಆರೋಪಿಸಿದ್ದಾರೆ. ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.