alex Certify ಔಟ್ ಲುಕ್ ಮ್ಯಾಗಜೀನ್ ರ್ಯಾಂಕಿಗ್: ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳ ಪಟ್ಟಿಯಲ್ಲಿ ಕುವೆಂಪು ವಿವಿಗೆ 30ನೇ ಸ್ಥಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಔಟ್ ಲುಕ್ ಮ್ಯಾಗಜೀನ್ ರ್ಯಾಂಕಿಗ್: ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳ ಪಟ್ಟಿಯಲ್ಲಿ ಕುವೆಂಪು ವಿವಿಗೆ 30ನೇ ಸ್ಥಾನ

ಶಿವಮೊಗ್ಗ: ಔಟ್ ಲುಕ್ ಮ್ಯಾಗಜೀನ್‌ ಪ್ರಕಟಿಸಿರುವ ಭಾರತದ ಸಾರ್ವಜನಿಕ ವಲಯದ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಗಳ ರ‍್ಯಾಂಕಿಂಗ್ ನಲ್ಲಿ ಕುವೆಂಪು ವಿವಿ 30ನೇ ಸ್ಥಾನ ಪಡೆದಿದೆ.

ದೇಶದ ಮುದ್ರಣ ಮಾಧ್ಯಮದಲ್ಲಿ ಪ್ರಸಿದ್ಧ ನಿಯತಕಾಲಿಕೆಯಾದ ಔಟ್ಲುಕ್ ಮ್ಯಾಗಜಿನ್ ವಿವಿಧ ಮಾನದಂಡಗಳನ್ನು ಪರಿಗಣಿಸಿ ಭಾರತದ ಸಾರ್ವಜನಿಕ ವಲಯದ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಗಳ  ರ‍್ಯಾಂಕಿಂಗ್ ಅನ್ನು ಆ. 3ರಂದು ಪ್ರಕಟಿಸಿದೆ.

ಇದರಲ್ಲಿ ಒಟ್ಟು ದೇಶದ 75 ಸಂಸ್ಥೆಗಳಿದ್ದು, ಕರ್ನಾಟಕದ ಗ್ರಾಮೀಣ ಭಾಗದ ವಿವಿಯಾದ ಕುವೆಂಪು ವಿವಿ ಅಗ್ರ 30ನೇ ಸ್ಥಾನ ಪಡೆದಿದೆ.

ನಿಯತಕಾಲಿಕೆಯು ಶೈಕ್ಷಣಿಕ ವಾತಾವರಣ, ಸಂಶೋಧನೆ ಮೂಲಭೂತ ಸೌಕರ್ಯಗಳು, ಆಡಳಿತ ಮತ್ತು ವಿಸ್ತರಣಾ ಕಾರ್ಯಕ್ರಮಗಳ ಐದು ಮಾನದಂಡಗಳ ಆಧಾರದಲ್ಲಿ ರ‍್ಯಾಂಕಿAಗ್ ಪಟ್ಟಿ ಸಿದ್ಧಪಡಿಸಿದೆ. ಕುವೆಂಪು ವಿಶ್ವವಿದ್ಯಾಲಯವು ಒಟ್ಟು ಸಾವಿರ ಅಂಕಗಳಿಗೆ 877 ಪಾಯಿಂಟ್ ಗಳಿಸಿದೆ. ಇದೇ ಪಟ್ಟಿಯಲ್ಲಿ ಮೈಸೂರು ವಿಶ್ವವಿದ್ಯಾಲಯವು ಎಂಟನೇ ಸ್ಥಾನ ಗಳಿಸಿದ್ದರೆ, ಬೆಂಗಳೂರು ವಿಶ್ವವಿದ್ಯಾಲಯವು 24ನೇ ಸ್ಥಾನದಲ್ಲಿದೆ. ಹಾಗೂ ಈ ಪಟ್ಟಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಕೃಷಿ ವಿಶ್ವವಿದ್ಯಾಲಯ, ಧಾರವಾಡ ಮತ್ತು ತುಮಕೂರು ವಿವಿಗಳು ಕರ್ನಾಟಕದಿಂದ ಸ್ಥಾನ ಪಡೆದಿವೆ.

ನಿಯತಕಾಲಿಕೆಯು ಪರಿಗಣಿಸಿರುವ ಮಾನದಂಡಗಳು ಇಂತಿವೆ:

ಶೈಕ್ಷಣಿಕ ಮತ್ತು ಸಂಶೋಧನಾ ಉತ್ಕೃಷ್ಟತೆ, ಔದ್ಯಮಿಕ ವಲಯ ಮತ್ತು ಉದ್ಯೋಗ ಕಲ್ಪಿಸುವಿಕೆ, ಮೂಲಭೂತ ಶೈಕ್ಷಣಿಕ ಸೌಲಭ್ಯಗಳು, ಆಡಳಿತ ಮತ್ತು ವಿಸ್ತರಣಾ ಕಾರ್ಯಕ್ರಮಗಳು ಹಾಗೂ ವೈವಿಧ್ಯತೆಯನ್ನು ಒಳಗೊಳ್ಳುವ ಸಾಮರ್ಥ್ಯವನ್ನು ಪರಿಗಣನೆಗೆ ತೆಗೆದುಕೊಂಡು ಒಟ್ಟು ಸಾವಿರ ಅಂಕಗಳಿಗೆ ಮೌಲ್ಯಮಾಪನ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...