alex Certify ಭಾರತೀಯ ವಧು ಅಲಂಕಾರದಲ್ಲಿ ಮಿಂಚಿದ ನೈಜೀರಿಯನ್ ಯುವತಿ; 60 ಲಕ್ಷಕ್ಕೂ ಅಧಿಕ ಮಂದಿಯಿಂದ ವಿಡಿಯೋ ವೀಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ವಧು ಅಲಂಕಾರದಲ್ಲಿ ಮಿಂಚಿದ ನೈಜೀರಿಯನ್ ಯುವತಿ; 60 ಲಕ್ಷಕ್ಕೂ ಅಧಿಕ ಮಂದಿಯಿಂದ ವಿಡಿಯೋ ವೀಕ್ಷಣೆ

ನೈಜೀರಿಯಾ ಮೂಲದ ಯುವತಿಯೊಬ್ಬರು ಭಾರತೀಯ ವಧುವಿನ ಮೇಕ್​ ಓವರ್​ ಪ್ರದರ್ಶಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.
ಈ ಕ್ಲಿಪ್​ ಅನ್ನು ಪಂಜಾಬ್​ನ ನೇಹಾ ವಾರೆಚ್​ ಗ್ರೋವರ್​ ಎಂಬ ಮೇಕಪ್​ ಕಲಾವಿದರು ಹಂಚಿಕೊಂಡಿದ್ದಾರೆ. ಯುವತಿ ಹೆಸರನ್ನು ಬಹಿರಂಗಪಡಿಸಲಾಗಿಲ್ಲ, ವಿಡಿಯೊದ ಆರಂಭಿಕ ಭಾಗಗಳಲ್ಲಿ ಕಂಡುಬರುವಂತೆ,

ಆಕೆ ಕಸೂತಿ ಮಾಡಿದ ಲೆಹೆಂಗಾವನ್ನು ಧರಿಸಿರುವುದು ಕಂಡುಬರುತ್ತದೆ. ಆಕೆಯ ಕೈಗಳಿಗೆ ಕೆಂಪು ಬಣ್ಣದ ಬಳೆಗಳನ್ನು ತೊಟ್ಟಿದ್ದು, ಅಲಂಕಾರಿಕ ಆಭರಣಗಳು, ಮೇಕಪ್​ ಮತ್ತು ಹೂವಿನ ಹಾರದಿಂದ ಸಜ್ಜುಗೊಳಿಸುವುದು ನೋಡಬಹುದಾಗಿದೆ.

ಭಾರತೀಯ ವಧುವಾಗಿ ಆಫ್ರಿಕನ್​ ಮಾಡೆಲ್​ನಲ್ಲಿ ತನ್ನ ಮೇಕ್​ ಓವರ್​ ಕೌಶಲ್ಯ ತೋರಿಸುವುದು ತನ್ನ ಕನಸಾಗಿತ್ತು ಎಂದು ನೇಹಾ ಬರೆದಿದ್ದಾರೆ. ಈ ಪ್ರಯತ್ನಕ್ಕಾಗಿ ನಾನು ಆಫ್ರಿಕನ್​ ಮಾಡೆಲ್​ ಹುಡುಕುತ್ತಿದ್ದೆ ಮತ್ತು ನಂತರ ನನಗೆ ಈ ನಿಜವಾದ ವಧು ಸಿಕ್ಕಿದರು. ನಾನು ತುಂಬಾ ಅದೃಷ್ಟಶಾಲಿ ಎಂದು ಭಾವಿಸಿದೆ, ಅವಳ ಪ್ರಮುಖ ದಿನಕ್ಕೆ ಆಕೆಯನ್ನು ಗೊಂಬೆ ರೀತಿ ಮಾಡಲು ನನಗೆ ಅವಕಾಶ ಸಿಕ್ಕಿತು ಎಂದು ವಿವರಣೆ ನೀಡಿದ್ದಾರೆ.

ಈ ವಿಡಿಯೊ 67 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದ್ದು, ಸಾವಿರಾರು ಲೈಕ್​ ಗಳಿಸಿದೆ. ನೆಟ್ಟಿಗರು ಕಲಾವಿದರ ಕೈಚಳಕವನ್ನು ಪ್ರಶಂಸಿಸಿದ್ದಾರೆ. “ನಿಮ್ಮ ಕೆಲಸಕ್ಕೆ ಪದಗಳಿಲ್ಲ” ಎಂದು ಒಬ್ಬರು ಕಾಮೆಂಟ್​ ಮಾಡಿದ್ದಾರೆ.

ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಧುವಿನ ಮೇಕ್​ ಓವರ್​ನ ಹಲವಾರು ಕ್ಲಿಪ್​ ಇದ್ದು, “ಆಕೆ ಬಯಸಿದ್ದನ್ನು ಪಡೆದಿದ್ದರಿಂದ ಸಂತೋಷವಾಗಿದೆ” ಎಂಬ ಶೀರ್ಷಿಕೆ ಇದೆ. ಅಂತಿಮವಾಗಿ ಆ ವಧುವಿನ ಮುಖದಲ್ಲಿ ಖುಷಿ ಕಾಣಿಸಿದೆ. ಆ ವಿಡಿಯೋ ಕೂಡ ವೈರಲ್​ ಆಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...