ಆಸ್ಟ್ರೇಲಿಯಾ: ಆಸ್ಟ್ರೇಲಿಯದ ವಿರೋಧ ಪಕ್ಷದ ನಾಯಕ ಪೀಟರ್ ಡಟ್ಟನ್, ಸಿಡ್ನಿಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಸಮಾರಂಭದಲ್ಲಿ ಭಾರಿ ಜನಸಮೂಹವನ್ನು ಉಲ್ಲೇಖಿಸಿ – ತಮ್ಮ ದೇಶದ ರಾಜಕಾರಣಿಗಳು ಪ್ರಧಾನಿ ನರೇಂದ್ರ ಮೋದಿಯ ಬಗ್ಗೆ “ಅಸೂಯೆ” ಹೊಂದಿದ್ದಾರೆ ಎಂದು ಹೇಳಿದರು.
ಆಸ್ಟ್ರೇಲಿಯನ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಡಟ್ಟನ್, ಪ್ರಧಾನಿ ಮೋದಿಯವರಿಗೆ ಆತಿಥ್ಯ ನೀಡುವಲ್ಲಿ ಭಾರತೀಯ ಸಮುದಾಯದ ಕೆಲಸವನ್ನು ಅವರು ಶ್ಲಾಘಿಸಿದರು.
“ರಾಜಕೀಯದ ಎರಡೂ ಕಡೆಯಿಂದ ಸಾಕಷ್ಟು ಜನರು ಹಾಜರಾಗಿದ್ದರು, ಆದರೆ ನಾನು ಇಂದು ಬೆಳಿಗ್ಗೆ ಪ್ರಧಾನ ಮಂತ್ರಿಗೆ ಹೇಳಿದೆ, ನಿನ್ನೆ ರಾತ್ರಿ ಅಲ್ಲಿದ್ದ ಪ್ರತಿಯೊಬ್ಬ ರಾಜಕಾರಣಿಯೂ ಹಾಗೂ ಹಾಜರಿದ್ದ ಸುಮಾರು 20 ಸಾವಿರ ಮಂದಿ ಒಕ್ಕೂರಲಿನಿಂದ ನಿಮ್ಮ ಹೆಸರನ್ನು ಜಪಿಸಿದರು. ಇದನ್ನು ನೋಡಿ ಇಲ್ಲಿದ್ದವರಿಗೆ ಅಸೂಯೆಯಾಗುತ್ತಿದೆ ಎಂದು ತಮಾಷೆ ಮಾಡಿದೆ’ ಎಂದು ಡಟ್ಟನ್ ಹೇಳಿದರು.
ಭಾರತದೊಂದಿಗಿನ ಸಂಬಂಧದ ಕುರಿತು ಮಾತನಾಡುತ್ತಾ ಡಟ್ಟನ್, “ಅವರ ಸರ್ಕಾರವು ಅಧಿಕಾರಲ್ಲಿದ್ದರೆ ಬಹಳ ಸುಧಾರಣೆಯಾಗುತ್ತದೆ” ಎಂದಿದ್ದಾರೆ.
ಮೇ 23 ರಂದು, ಪಿಎಂ ಮೋದಿ ಅವರು ಪಪುವಾ ನ್ಯೂಗಿನಿಯಾ ಭೇಟಿಯನ್ನು ಮುಗಿಸಿದ ನಂತರ ತಮ್ಮ ಮೂರು ರಾಷ್ಟ್ರಗಳ ಭೇಟಿಯ ಮೂರನೇ ಮತ್ತು ಅಂತಿಮ ಹಂತದ ಭಾಗವಾಗಿ ಆಸ್ಟ್ರೇಲಿಯಾದ ಸಿಡ್ನಿಗೆ ಭೇಟಿ ನೀಡಿದ್ದರು. ಒಂಬತ್ತು ವರ್ಷಗಳಲ್ಲಿ ಇದು ಅವರ ಮೊದಲ ಆಸ್ಟ್ರೇಲಿಯಾ ಭೇಟಿಯಾಗಿತ್ತು.