ಅಮೆರಿಕಾದಲ್ಲಿ ಬೆಳಕಿನ ಹಬ್ಬ ಆಚರಿಸಿದ ಪ್ರಿಯಾಂಕಾ ಚೋಪ್ರಾ – ನಿಕ್ ಜೋನಾಸ್ ದಂಪತಿ 07-11-2021 4:51PM IST / No Comments / Posted In: Featured News, Live News, Entertainment ದೇಶದಾದ್ಯಂತ ದೀಪಾವಳಿ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು. ಇದ್ರಿಂದ ಬಾಲಿವುಡ್ ಸೆಲೆಬ್ರೆಟಿಗಳು ಕೂಡ ಹೊರತಾಗಿಲ್ಲ. ಈ ವರ್ಷದ ದೀಪಾವಳಿಯು ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಅವರಿಗೆ ಭಾರಿ ವಿಶೇಷವಾಗಿತ್ತು. ಯಾಕೆಂದ್ರೆ ಹೊಸ ಮನೆಯಲ್ಲಿ ಇದು ದಂಪತಿಯ ಮೊದಲ ದೀಪಾವಳಿಯಾಗಿದೆ. ನಟಿ ಮತ್ತು ನಿಕ್ ಜೋನಾಸ್ ಗುರುವಾರ ರಾತ್ರಿ (ಭಾರತದಲ್ಲಿ ಶುಕ್ರವಾರ) ತಮ್ಮ ಕ್ಯಾಲಿಫೋರ್ನಿಯಾದ ಮನೆಯಲ್ಲಿ ತಮ್ಮ ಕುಟುಂಬ ಮತ್ತು ಸ್ನೇಹಿತರ ಜೊತೆಗೆ ದೀಪಾವಳಿ ಹಬ್ಬವನ್ನು ಆಚರಿಸಿ, ಸಂಭ್ರಮಿಸಿದ್ದಾರೆ. ಕ್ರಿಕೆಟ್ ಆಡಲು ಹೋದಾಗಲೇ ದುರಂತ: ಕೃಷಿ ಹೊಂಡಕ್ಕೆ ಬಿದ್ದು ಮೂವರ ಸಾವು ಶುಕ್ರವಾರ ಸಂಜೆ (ಭಾರತದಲ್ಲಿ ಶನಿವಾರ ಬೆಳಿಗ್ಗೆ), ಪ್ರಿಯಾಂಕಾ ಚೋಪ್ರಾ ತಮ್ಮ ಮನೆಯಲ್ಲಿ ದೀಪಾವಳಿ ಅಲಂಕಾರಗಳನ್ನು ಮಾಡಿರುವ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ತನ್ನ ಮತ್ತು ನಿಕ್ ಜೋನಾಸ್‌ನ ಮುದ್ದಾದ ಫೋಟೋಗಳನ್ನು ಸಹ ಪೋಸ್ಟ್ ಮಾಡಿದ್ದಾರೆ. ಪಿಗ್ಗಿ, ಬಿಳಿ ಬಣ್ಣದ ಪೀಕಾಕ್ ಲೆಹೆಂಗಾದಲ್ಲಿ ಸುಂದರವಾಗಿ ಕಾಣುತ್ತಿದ್ದರೆ, ಗಾಯಕ ನಿಕ್ ಕೆಂಪು ಬಣ್ಣದ ಶೆರ್ವಾನಿಗೆ ಕಪ್ಪು ಜಾಕೆಟ್ ಧರಿಸಿದ್ದಾರೆ. ಪುನೀತ್ ಸಮಾಧಿ ಬಳಿ ಮದುವೆಯಾಗುವವರಿಗೆ ರಾಘಣ್ಣ ಮುಖ್ಯ ಮಾಹಿತಿ ಫೋಟೋ ಪೋಸ್ಟ್ ಮಾಡಿದ ಪಿಗ್ಗಿ ತನ್ನ ಶೀರ್ಷಿಕೆಯಲ್ಲಿ, ಈ ವರ್ಷದ ದೀಪಾವಳಿ ತನಗೆ ಮತ್ತು ನಿಕ್ ಜೋನಾಸ್‌ಗೆ ಏಕೆ ಯಾವಾಗಲೂ ವಿಶೇಷವಾಗಿರುತ್ತದೆ ಎಂಬುದನ್ನು ಹಂಚಿಕೊಂಡಿದ್ದಾರೆ. ನಮ್ಮ ಮೊದಲ ಮನೆಯಲ್ಲಿ ನಮ್ಮ ಮೊದಲ ದೀಪಾವಳಿ. ಇದು ಯಾವಾಗಲೂ ವಿಶೇಷವಾಗಿರುತ್ತದೆ ಎಂದು ಪ್ರಿಯಾಂಕ ಹೇಳಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಮಾಡಿದ ಲಕ್ಷ್ಮಿ ಪೂಜೆಯ ಒಂದು ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್, ಅಮೆರಿಕಾದ ಲಾಸ್ ಏಂಜಲೀಸ್‌ನ ಸ್ಯಾನ್ ಫೆರ್ನಾಂಡೋ ದುಬಾರಿ ಪ್ರದೇಶವಾದ ಎನ್ಸಿನೊದಲ್ಲಿ ವಾಸಿಸುತ್ತಿದ್ದಾರೆ.