ಮಕ್ಕಳು ಜನಿಸುವ ಮೊದಲೇ ಪಾಲಕರು ಮಕ್ಕಳಿಗೆ ಹೆಸರಿಡಲು ಶುರು ಮಾಡ್ತಾರೆ. ಕೆಲ ಪಾಲಕರು, ಮಕ್ಕಳು ಜನಿಸಿದ ಮೇಲೆ, ಮಕ್ಕಳಿಗಾಗಿ ಹೆಸರು ಹುಡುಕ್ತಾರೆ. ಆದ್ರೆ ಬೆಲ್ಜಿಯಂನ ದಂಪತಿ, 11 ಮಕ್ಕಳಿಗೆ ಸುಲಭ ಹೆಸರಿಟ್ಟು, ಅಚ್ಚರಿಗೊಳಿಸಿದ್ದಾರೆ.
11 ಮಕ್ಕಳಿಗೆ ಹೆಸರಿಡಲು ಕೇವಲ 4 ಅಕ್ಷರಗಳನ್ನು ಬಳಸಿದ್ದಾರೆ. ದಂಪತಿ ಗ್ವೆನಿ ಬ್ಲಾಂಕರ್ಟ್ ಮತ್ತು ಮರಿನೋ ವಾನೀನೊಗೆ ಒಟ್ಟು 11 ಮಕ್ಕಳು. ಈ ಪೈಕಿ 7 ಹುಡುಗಿಯರು ಮತ್ತು 4 ಹುಡುಗರು. ದಂಪತಿ ಎಲ್ಲ ಮಕ್ಕಳಿಗೆ ಇಂಗ್ಲಿಷ್ ವರ್ಣಮಾಲೆಯ ಕೇವಲ 4 ಅಕ್ಷರಗಳಿಂದ ಹೆಸರಿಟ್ಟಿದ್ದಾರೆ. ಮೊದಲ ಇಬ್ಬರು ಮಕ್ಕಳಿಗೆ ಅಲೆಕ್ಸ್ ಮತ್ತು ಆಕ್ಸೆಲ್ ಎಂದು ಹೆಸರಿಟ್ಟಿದ್ದಾರೆ.ಉಳಿದ ಮಕ್ಕಳಿಗೆ ಎ, ಇ, ಎಲ್ ಮತ್ತು ಎಕ್ಸ್ ಅಕ್ಷರಗಳಿಂದ ಹೆಸರಿಟ್ಟಿದ್ದಾರೆ.
ದಂಪತಿ,ಅಲೆಕ್ಸ್, ಆಕ್ಸೆಲ್, ಕ್ಸೆಲಾ, ಲೆಕ್ಸಾ, ಕ್ಸೇಲ್, ಕ್ಸೀಲ್, ಎಕ್ಸಲಾ, ಲೀಕ್ಸ್, ಕ್ಸೇಲ್, ಎಲಾಕ್ಸ್ ಮತ್ತು ಅಲ್ಕ್ಸ್ ಎಂದು ಹೆಸರಿಟ್ಟಿದ್ದಾರೆ. 5 ಮಕ್ಕಳು ಒಂದೇ ಶಾಲೆಯಲ್ಲಿ ಓದುತ್ತಿದ್ದಾರೆ. ಈ ನಾಲ್ಕು ಅಕ್ಷರ ಬಳಸಿ 24 ಹೆಸರಿಡಬಹುದು. ಅದ್ರಲ್ಲಿ 11 ಬಳಕೆಯಾಗಿದೆ. ಇನ್ನೂ 13 ಹೆಸರು ಬಾಕಿಯಿದೆ. ಮುಂದೆ ಹುಟ್ಟುವ ಮಕ್ಕಳಿಗೆ ಅದ್ರಲ್ಲಿ ಒಂದನ್ನು ಇಡಲು ದಂಪತಿ ಮುಂದಾಗಿದ್ದಾರೆ.