ರಾತ್ರಿ ಅನೇಕ ಕನಸುಗಳು ಬೀಳುತ್ತವೆ. ಕೆಲ ಕನಸುಗಳು ಖುಷಿ ನೀಡಿದ್ರೆ ಮತ್ತೆ ಕೆಲ ಕನಸುಗಳು ಭಯ ಹುಟ್ಟಿಸುತ್ತವೆ. ಸ್ವಪ್ನ ಶಾಸ್ತ್ರದಲ್ಲಿ ಕನಸು ಹಾಗೂ ಅದರ ಅರ್ಥವನ್ನು ಹೇಳಲಾಗಿದೆ. ಭಯಾನಕ ಕನಸುಗಳು ಏನನ್ನು ಸೂಚಿಸುತ್ತವೆ ಎಂಬುದನ್ನು ಹೇಳಲಾಗಿದೆ.
ಕನಸಿನಲ್ಲಿ ನೀವು ಎತ್ತರದಿಂದ ಬೀಳುವಂತೆ ಕಂಡರೆ ನಿಮ್ಮ ಆದಾಯದಲ್ಲಿ ಇಳಿಕೆಯಾಗಲಿದೆ ಎಂದರ್ಥ. ಮುಂಬರುವ ದಿನಗಳಲ್ಲಿ ಸವಾಲುಗಳನ್ನು ನೀವು ಎದುರಿಸಬೇಕಾಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.
ಕನಸಿನಲ್ಲಿ ತಲೆ ಕತ್ತರಿಸಿದಂತೆ ಕಂಡರೆ ಇದು ಶುಭಕರ. ಇದು ಆರ್ಥಿಕ ಲಾಭವನ್ನು ಸೂಚಿಸುತ್ತದೆ. ಇದು ಯಶಸ್ಸಿನ ಸೂಚಕವಾಗಿರುತ್ತದೆ.
ಕನಸಿನಲ್ಲಿ ನಿಮಗೆ ಅಪಘಾತವಾದಂತೆ ಕಂಡರೆ, ಅದು ಮುಂಬರುವ ಸಮಸ್ಯೆಗಳ ಸಂಕೇತವಾಗಿದೆ. ಇಂಥ ಕನಸು ಕಂಡರೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಬೇಕು.
ಕನಸಿನಲ್ಲಿ ನೀವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಅಥವಾ ನೇಣು ಹಾಕಿಕೊಳ್ಳುತ್ತಿರುವಂತೆ ಕಂಡರೆ ಅದು ಕೆಟ್ಟ ಸಂಕೇತವಾಗಿದೆ. ಮನಸ್ಸನ್ನು ಧನಾತ್ಮಕವಾಗಿಸಲು ತಕ್ಷಣ ಕೆಲ ಕ್ರಮ ಕೈಗೊಳ್ಳಬೇಕಾಗುತ್ತದೆ.
ಕನಸಿನಲ್ಲಿ ನೀವು ಸತ್ತಂತೆ ಕಂಡರೆ ಅದು ಶುಭಕರ. ಹಳೆಯ ಸಮಸ್ಯೆಗೆ ಅಂತ್ಯ ಸಿಗಲಿದೆ ಎಂಬ ಸೂಚನೆ. ನಿಮ್ಮ ವಯಸ್ಸು ಹೆಚ್ಚಾಗಲಿದೆ ಎಂಬ ನಂಬಿಕೆಯಿದೆ.