ಟೋಕಿಯೊ ಒಲಿಂಪಿಕ್ಸ್ ನ ಮೂರನೇ ದಿನವಾದ ಇಂದು ಭಾರತಕ್ಕೆ ಹೊಡೆತ ಬಿದ್ದಿದೆ. ಚೀನಾ ಉತ್ತಮ ಪ್ರದರ್ಶನ ನೀಡಿದ್ದು, ಮೂರು ದಿನಗಳಲ್ಲಿ 6 ಚಿನ್ನದ ಪದಕ ಪಡೆದ ಚೀನಾ, ಪದಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಡೈವಿಂಗ್ ಮತ್ತು ವೇಟ್‌ಲಿಫ್ಟಿಂಗ್‌ನಲ್ಲಿ ಚೀನಾ ತಲಾ ಎರಡು ಚಿನ್ನ ಗೆದ್ದಿದೆ. ಫೆನ್ಸಿಂಗ್ ಮತ್ತು ಶೂಟಿಂಗ್‌ನಲ್ಲಿ ತಲಾ ಒಂದು ಚಿನ್ನದ ಪದಕವನ್ನು ಪಡೆದಿದೆ.
ಚೀನಾ ನಂತ್ರದ ಸ್ಥಾನದಲ್ಲಿ ಜಪಾನ್ ಇದೆ. ಜಪಾನ್ ಐದು ಚಿನ್ನದೊಂದಿಗೆ ಎರಡನೇ ಸ್ಥಾನದಲ್ಲಿದೆ. ಜೂಡೋದಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ನಾಲ್ಕು ಚಿನ್ನದೊಂದಿಗೆ ಅಮೆರಿಕ ಮೂರನೇ ಸ್ಥಾನದಲ್ಲಿದೆ. ಅಮೆರಿಕ 10 ಪದಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಚೀನಾಕ್ಕೆ ಇದುವರೆಗೆ 13 ಪದಕಗಳು ದೊರೆತಿವೆ.
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತ ಉತ್ತಮ ಆರಂಭ ನೀಡಿದೆ. ಮೊದಲ ದಿನ, 26 ವರ್ಷದ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿ ಪದಕ ಪಡೆದಿದ್ದಾರೆ. ಒಟ್ಟಾರೆ ಪದಕಗಳ ಪಟ್ಟಿಯಲ್ಲಿ ಭಾರತ 25 ನೇ ಸ್ಥಾನದಲ್ಲಿದೆ. ಚೀನಾ, ಜಪಾನ್, ಯುಎಸ್ಎ ಮತ್ತು ದಕ್ಷಿಣ ಕೊರಿಯಾವನ್ನು ಹೊರತುಪಡಿಸಿ, 15 ದೇಶಗಳು ಕನಿಷ್ಠ ಒಂದು ಚಿನ್ನ ಗೆದ್ದಿವೆ.
ಒಲಂಪಿಕ್ಸ್ ಚಿನ್ನದ ಪದಕದ ಪಟ್ಟಿ:
1. ಚೀನಾ : ಚಿನ್ನ 6, ಬೆಳ್ಳಿ 2, ಕಂಚು 5
2. ಜಪಾನ್ : ಚಿನ್ನ 5, ಬೆಳ್ಳಿ 1, ಕಂಚು 0
3. ಅಮೆರಿಕ : ಚಿನ್ನ 4,ಬೆಳ್ಳಿ 3, ಕಂಚು 4
4. ಆಸ್ಟ್ರಾಲಿಯಾ: ಚಿನ್ನ 2,ಬೆಳ್ಳಿ 1,ಕಂಚು 2
5. ದ.ಕೊರಿಯಾ: ಚಿನ್ನ 2,ಬೆಳ್ಳಿ 0, ಕಂಚು 3
25. ಭಾರತ : ಚಿನ್ನ 0, ಬೆಳ್ಳಿ 1, ಕಂಚು 0