ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸದ ನಂತರ ಒಸಾಮಾ ಬಿನ್ ಲಾಡೆನ್ ನ ಮಾಜಿ ಸಹಾಯಕನಾಗಿದ್ದ ಅಮೀನ್-ಉಲ್-ಹಕ್ ಅಫ್ಘನ್ ಗೆ ಹಿಂದಿರುಗಿದ್ದಾನೆ ಎಂದು ವರದಿ ಹೇಳಿದೆ.
ಅಫ್ಘಾನಿಸ್ತಾನದ ಪ್ರಮುಖ ಅಲ್-ಖೈದಾ ನಾಯಕ ಅಮಿನ್-ಉಲ್-ಹಕ್ ಇದೀಗ ತನ್ನ ನಂಗರ್ಹಾರ್ ಪ್ರಾಂತ್ಯಕ್ಕೆ ಮರಳಿದ್ದಾನೆ ಎನ್ನಲಾಗಿದೆ. ಈತ ಅಲ್-ಖೈದಾ ಮಾಜಿ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ನ ಆಪ್ತ ಸಹಾಯಕನಾಗಿದ್ದ. 2011ರಲ್ಲಿ ಪಾಕಿಸ್ತಾನದ ಅಬೋಟಾಬಾದ್ ನಲ್ಲಿ ಅಮೆರಿಕ ಸೈನಿಕರು ಲಾಡೆನ್ ನನ್ನು ಕೊಂದಿದ್ದರು.
BIG NEWS: ಮಾದಕ ಬ್ಯೂಟಿ ಹೆಸರಲ್ಲಿ ಕಾಸ್ಮೆಟಿಕ್; ವಿಚಾರಣೆ ವೇಳೆ ಸೋನಿಯಾ ಬಾಯ್ಬಿಟ್ಟ ರಹಸ್ಯವೇನು….?
ಅಮೀನ್-ಉಲ್-ಹಕ್ ತೊರಾಬೋರಾದಲ್ಲಿ ಒಸಾಮಾ ಬಿನ್ ಲಾಡೆನ್ ನ ಭದ್ರತೆಯ ಉಸ್ತುವಾರಿ ನೋಡಿಕೊಂಡಿದ್ದ. 80ರ ದಶಕದಲ್ಲಿ ಅಬ್ದುಲ್ಲಾ ಅಜ್ಜಮ್ ಜೊತೆ ಮಕ್ತಾಬಾ ಅಖಿದ್ ಮತ್ ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಲಾಡೆನ್ ಗೆ ಹತ್ತಿರವಾಗಿದ್ದ.