ಅಮೆರಿಕ ಸಂವಿಧಾನದ ಬಹಳ ಹಳೆಯ ಪ್ರತಿಯೊಂದು ಹರಾಜಿನಲ್ಲಿ ದಾಖಲೆಯ $43.2 ದಶಲಕ್ಷ ಮೌಲ್ಯಕ್ಕೆ ಮಾರಾಟವಾಗಿದೆ. ಕ್ರಿಪ್ಟೋಕರೆನ್ಸಿ ಸಮೂಹವೊಂದು ಸಾಮೂಹಿಕ ನಿಧಿಯ ಮೂಲಕ ಕೂಗಿದ ಬಿಡ್ ಅನ್ನು ಮೀರಿದ ಮೊತ್ತ ಕೂಗಿದ ಅನಾಮಿಕ ವ್ಯಕ್ತಿಯೊಬ್ಬರು ಈ ಪ್ರತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸಂವಿಧಾನದ ದಾಖಲೆಯ 1787ರ ಕಾಲಕ್ಕೆ ಸೇರಿದ 13 ಅಸಲಿ ಪ್ರತಿಗಳ ಪೈಕಿ ಒಂದಾದ ಇದರ ಹರಾಜಿನ ಮೂಲ ಬೆಲೆ $15 ದಶಲಕ್ಷ ಇತ್ತು. ಆದರೆ ಆ ಬೆಲೆಯ ಬಹುತೇಕ ಮೂರು ಪಟ್ಟಿನಷ್ಟು ದುಡ್ಡಿಗೆ ಮೇಲ್ಕಂಡ ಪ್ರತಿ ಬಿಕರಿಯಾಗಿದೆ. ಸೋಥೆಬೀ’ಸ್ನ ನ್ಯೂಯಾರ್ಕ್ ಕೇಂದ್ರದಲ್ಲಿ ನಡೆದ ಈ ಹರಾಜು ಎಂಟು ನಿಮಿಷಗಳಲ್ಲಿ ಮುಕ್ತಾಯವಾಗಿದೆ.
1988ರಲ್ಲಿ ಇಂಥದ್ದೇ ಮತ್ತೊಂದು ಪ್ರತಿಯನ್ನು ಹರಾಜಿಗೆ ಇಟ್ಟಿದ್ದಾಗ, ಅದು $165,000ಕ್ಕೆ ಮಾರಾಟವಾಗಿತ್ತು.
BIG NEWS: ಬಿಡಿಎ ಕಚೇರಿ ಮೇಲೆ ACB ಮುಂದುವರೆದ ಶೋಧ; ಎಸ್.ಆರ್ ವಿಶ್ವನಾಥ್ ಹೇಳಿದ್ದೇನು?
“ಕಾನ್ಸ್ಟಿಟ್ಯೂಷನ್ಡಿಎಓ” ಹೆಸರಿನ ಕ್ರಿಪ್ರೋಕರೆನ್ಸಿ ಸಮೂಹವು ಈ ಪ್ರತಿಯನ್ನು ಖರೀದಿಸಿ ಸಾರ್ವಜನಿಕ ಪ್ರದರ್ಶನಕ್ಕೆ ಇಡುವುದಾಗಿ ಹೇಳಿ ಆನ್ಲೈನ್ ಮೂಲಕ ಸಾಮೂಹಿಕ ನಿಧಿ ಸಂಗ್ರಹಣೆ ಪೇಜ್ ಒಂದನ್ನು ತೆರೆದಿತ್ತು. ತನ್ಮೂಲಕ 11,600 ಕ್ರಿಪ್ಟೋಕರೆನ್ಸಿ ಎಥರ್ ($47 ದಶಲಕ್ಷ) ಸಂಗ್ರಹವನ್ನೂ ಮಾಡಿತ್ತು ಈ ಸಮೂಹ. ಆದರೆ ಹೆಸರು ಬಹಿರಂಗ ಮಾಡಲು ಇಚ್ಛಿಸದ ವ್ಯಕ್ತಿಯೊಬ್ಬರು ಈ ಬಿಡ್ನಲ್ಲಿ ಗೆದ್ದುಕೊಂಡಿದ್ದಾರೆ.
“ಅಮೆರಿಕ ಸಂವಿಧಾನದ ಮೊದಲ ಮುದ್ರಣದ ಅತ್ಯಪರೂಪದ ಹಾಗೂ ಅಸಾಮಾನ್ಯ ಇತಿಹಾಸವುಳ್ಳ ದಾಖಲೆ ಇದಾಗಿದೆ,” ಎಂದು ಸೋತೆಬೀ’ಸ್ ಹರಾಜಿನ ವೇಳೆ ಪ್ರತಿಯನ್ನು ಪರಿಚಯಿಸಿದೆ.