alex Certify BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ 21 ದಿನ ‘ಓದುವ ಅಭಿಯಾನ’ ಆಯೋಜಿಸಿ : ‘ಶಿಕ್ಷಣ ಇಲಾಖೆ’ ಮಹತ್ವದ ಸುತ್ತೋಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ 21 ದಿನ ‘ಓದುವ ಅಭಿಯಾನ’ ಆಯೋಜಿಸಿ : ‘ಶಿಕ್ಷಣ ಇಲಾಖೆ’ ಮಹತ್ವದ ಸುತ್ತೋಲೆ

ಬೆಂಗಳೂರು : ರಾಜ್ಯದ ಎಲ್ಲಾ ಶಾಲೆಗಳಲ್ಲಿ ಓದುವ ಅಭಿಯಾನ ಆಯೋಜಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಏನಿದೆ ಸುತ್ತೋಲೆಯಲ್ಲಿ..?

“ಇಂದಿನ ಓದುಗರು ನಾಳಿನ ನಾಯಕರು” ಎಂಬ ಗಾದೆ ಮಾತಿನಂತೆ ಮಕ್ಕಳಲ್ಲಿ ಓದುವ ಕೌಶಲ್ಯಗಳು ಹಾಗೂ ಹವ್ಯಾಸ ಬೆಳೆಸುವುದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅನುವು ಮಾಡುತ್ತದೆ. ಈ ನಿಟ್ಟಿನಲ್ಲಿ 1 ರಿಂದ 7ನೇ ತರಗತಿವರೆಗೆ ಓದುತ್ತಿರುವ ಮಕ್ಕಳಲ್ಲಿ ಓದುವ ಕೌಶಲ್ಯ ಸಂಸ್ಕೃತಿ ಮತ್ತು ಅಭ್ಯಾಸವನ್ನು ಬೆಳೆಸುವುದು ಓದು ಅಭಿಯಾನದ ಉದ್ದೇಶವಾಗಿದೆ.

ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಲು, ಅಭಿಯಾನದ ರೂಪದಲ್ಲಿ ಓದುವ ಚಟುವಟಿಕೆಗಳನ್ನು ಆಯೋಜಿಸಿ, ಮಕ್ಕಳಲ್ಲಿ ಓದುವಿಕೆ ಮತ್ತು ಪುಸ್ತಕಗಳ ಬಗ್ಗೆ ಒಲವು ಬೆಳಸುವಂತೆ ಕ್ರಮವಹಿಸಬೇಕಾಗಿರುತ್ತದೆ. ಗ್ರಹಿಕೆ ಸಾಮರ್ಥ್ಯಗಳನ್ನು ಹಾಗೂ ಅರಿವಿನ ಕೌಶಲ್ಯಗಳ ಅಭಿವೃದ್ಧಿಗೆ ಪುಸ್ತಕಗಳು ಪಾತ್ರ ಮಹತ್ವದ್ದಾಗಿರುತ್ತದೆ. ಈ ಹಿನ್ನಲೆಯಲ್ಲಿ 1 ರಿಂದ 7ನೇ ತರಗತಿವರೆಗೆ ಓದುತ್ತಿರುವ ಮಕ್ಕಳಿಗಾಗಿ ಶಾಲೆಗಳಲ್ಲಿ ರಾಜ್ಯಾದ್ಯಂತ 21 ದಿನಗಳ ಓದುವ ಅಭಿಯಾನದ ಚಟುವಟಿಕೆಗಳ ಮಾರ್ಗದರ್ಶಿಯನ್ನು ವಿನ್ಯಾಸಗೊಳಿಸಲಾಗಿದೆ. ಮಕ್ಕಳಿಗೆ ಪ್ರತಿ 21 ದಿನ ಮಾಡಬೇಕಾದ ಚಟುವಟಿಕೆಗಳ ವಿವರವಾದ ವಿನ್ಯಾಸದೊಂದಿಗೆ ಕಥೆಯ ಚಟುವಟಿಕೆ ಮಾರ್ಗದರ್ಶಿ ವಿವರಗಳನ್ನು ಲಗತ್ತಿಸಲಾಗಿದೆ. ಪ್ರಾಥಮಿಕ ತರಗತಿ ಮಕ್ಕಳಿಗೆ ತರಗತಿ/ವಯಸ್ಸಿಗೆ ಸೂಕ್ತವಾದ ಓದುವ ಸಾಮಗ್ರಿಗಳು ಲಭ್ಯವಿಲ್ಲದಿದ್ದರೆ, ಕಥೆಯ ಚಟುವಟಿಕೆ ಮಾರ್ಗದರ್ಶಿ. pdf ಅನ್ನು ಬಳಸಬಹುದು. ಇದರಲ್ಲಿರುವ, ಬಾರ್ಕೋಡ್ ಅನ್ನು ಸ್ಕ್ಯಾನ್ ಮಾಡಿ ಮಕ್ಕಳಿಗೆ ಕಥೆಗಳನ್ನು ಓದಿ ಹೇಳಬಹುದು.

ಚಟುವಟಿಕೆಯನ್ನು ಪ್ರಾರ್ಥನಾ ಸಭೆ, ನಲಿಕಲಿ ತರಗತಿಯ ಮೊದಲನೆಯ ಅವಧಿ ಅಥವಾ ಶಾಲಾ ಪಠ್ಯಕ್ರಮದಲ್ಲಿ ನಿಗದಿಪಡಿಸಿದ ಗ್ರಂಥಾಲಯದ ಅವಧಿಯ ಹೀಗೆ ಶಾಲೆಯ ವಹಿವಾಟಿಗೆ ಅನ್ವಯಿಸುವಂತೆ ಹಾಗೂ ಬೋಧನೆಗೆ ತೊಂದರೆಯಾಗದಂತೆ ಚಟುವಟಿಕೆಗಳನ್ನು ಕಡ್ಡಾಯವಾಗಿ ಆಯೋಜಸಿಸುವುದು. ಓದುವ ಅಭಿಯಾನದ ಚಟುವಟಿಕೆಗಳ ಮಾರ್ಗದರ್ಶಿ ಶಿಕ್ಷಕರಿಗೆ ಅದರ ಪರಿಚಯ ಮಾಡಿಕೊಡಲು ಸಹಕಾರಿಯಾಗುವಂತೆ ವಿನ್ಯಾಸಗೊಂಡಿದೆ. ಇದಲ್ಲದೆ ಶಿಕ್ಷಕರು ತಮ್ಮ ಕ್ರಿಯಾ ಶೀಲತೆಯಿಂದ ಇತರೆ ಓದುವ ಚಟುವಟಿಕೆಗಳನ್ನು ಶಾಲೆಗಳಲ್ಲಿ ಅಳವಡಿಸಿಕೊಳ್ಳಬಹುದಾಗಿದೆ.

ಓದುವ ಅಭಿಯಾನದ ಅವಧಿಯು ಸೆಪ್ಟೆಂಬರ್ 3 ರಿಂದ18 ರವರೆಗೆ ಮತ್ತು ಸೆಪ್ಟೆಂಬರ್ 26 ರಿಂದ 30, 2024 ರವರೆಗೆ ಇರುತ್ತದೆ (20.09.2024 ರಿಂದ 25.09.2024 ರವರೆಗೆ ಶಾಲೆಗಳಲ್ಲಿ SA-1 ನಡೆಸಲು ಸುಗಮಗೊಳಿಸಲಾಗಿದೆ. ಸೆಪ್ಟೆಂಬರ್ 3 ರಂದು ಅಭಿಯಾನದ ಪ್ರಾರಂಭ ಚಟುವಟಿಕೆಯಾಗಿ ರೀಡ್-ಎ-ಥಾನ್ ನಡೆಸಲಾಗುವುದು. ಮಕ್ಕಳು, ಶಿಕ್ಷಕರು, ಕ್ಲಸ್ಟರ್/ಬ್ಲಾಕ್/ಜಿಲ್ಲೆ/ರಾಜ್ಯ ಮಟ್ಟದಅಧಿಕಾರಿಗಳು ಎಲ್ಲಾ ಕೆಲಸಗಳನ್ನು ಬದಿಗೆ ಒತ್ತಿ ಬೆಳಿಗ್ಗೆ 11:00 ರಿಂದ 11:30 ರವರೆಗೆ ತಮ್ಮ ನೆಚ್ಚಿನ ಪುಸ್ತಕವನ್ನು ಓದುತ್ತಾರೆ.

ಪಾತ್ರಗಳು ಮತ್ತು ಜವಾಬ್ದಾರಿಗಳುಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಈ ಕೆಳಕಂಡಂತೆ ಕ್ರಮ ವಹಿಸುವುದು.
1. ಡಯಟ್ ಪ್ರಾಂಶುಪಾಲರು ಸೆಪ್ಟೆಂಬರ್ 3 ರಿಂದ 18 ರವರೆಗೆ ಮತ್ತು ಸೆಪ್ಟೆಂಬರ್ 26 ರಿಂದ 30, 2024 ರವರೆಗೆ ಎಲ್ಲಾ ಶಾಲೆಗಳಲ್ಲಿ ಓದುವ ಅಭಿಯಾನವನ್ನು ನಡೆಸುವುದನ್ನು ಖಚಿತ ಪಡಿಸಿಕೊಳ್ಳಲು ಸಂಬಂದಿಸಿದ ಎಲ್ಲಾ ತಾಲೂಕು ಕಛೇರಿಗಳಿಗೆ ಮಾಹಿತಿಯನ್ನು ನೀಡಲು ಕ್ರಮವಹಿಸುವುದು.
2. ಉಪನಿರ್ದೇಶಕರು (ಆಡಳಿತ) ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಎಲ್ಲಾ ಹಂತದ ಅಧಿಕಾರಿಗಳಿಗೆ ಹಾಗೂ ಶಾಲೆಗಳಿಗೆ ಮಾರ್ಗದರ್ಶನ నిడి ಕಾರ್ಯಕ್ರಮವು ಕಡ್ಡಾಯವಾಗಿ ಅನುಷ್ಠಾನಗೊಳ್ಳುವಂತೆ ಖಚಿತಪಡಿಸಿಕೊಳ್ಳುವುದು.
3. ಶಿಕ್ಷಕರು ಮತ್ತು ತಾಲೂಕಿನ ಅಧಿಕಾರಿಗಳು ಈಗಾಗಲೇ ತಾಲ್ಲೂಕುವಾರು ಸ್ಥಾಪಿತವಾದ ವಾಟ್ಸಾಪ್ ಗುಂಪುಗಳ ಭಾಗವಾಗಿರುತ್ತಾರೆ. ಶಾಲೆಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಪರಿಶೀಲಿಸಲು ಈ ಗುಂಪುಗಳನ್ನು ಬಳಸಿಕೊಂಡು ಶಿಕ್ಷಕರು ವಾರದ ಕೊನೆಯಲ್ಲಿ ಶಾಲೆಗಳಲ್ಲಿ ನಡೆದ ಚಟುವಟಿಕೆಗಳ 3-4 ಫೋಟೋಗಳನ್ನು ಈ ಗುಂಪಿನಲ್ಲಿ ಪೋಸ್ಟ್ ಮಾಡುವಂತೆ ಮಾರ್ಗದರ್ಶನ ನೀಡಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...