ಕಳೆದ ಭಾನುವಾರ ಗುಜರಾತಿನ ಮೊರ್ಬಿ ನಗರದಲ್ಲಿ ತೂಗು ಸೇತುವೆ ಕುಸಿದು ಬಿದ್ದ ಪರಿಣಾಮ 135 ಮಂದಿ ಮೃತಪಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಏಳು ಮಂದಿಯನ್ನು ಬಂಧಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ತನಿಖೆ ವೇಳೆ ಸ್ಫೋಟಕ ಸಂಗತಿಗಳು ಬಹಿರಂಗವಾಗುತ್ತಿದ್ದು, ಈ ಸೇತುವೆ ದುರಸ್ತಿ ಕಾರ್ಯವನ್ನು ಎರಡು ಕೋಟಿ ರೂಪಾಯಿಗಳಿಗೆ ಗುತ್ತಿಗೆ ಪಡೆದಿದ್ದ ವಾಚ್ ತಯಾರಿಕಾ ಕಂಪನಿ ಒರೆವಾ, ಇದರ ಉಪಗುತ್ತಿಗೆಯನ್ನು ಮತ್ತೊಂದು ಕಂಪನಿ ದೇವ್ ಪ್ರಕಾಶ್ ಸೊಲ್ಯೂಷನ್ ಗೆ ವಹಿಸಿಕೊಟ್ಟಿದ್ದು ಈಗಾಗಲೇ ಬಹಿರಂಗವಾಗಿದೆ.
ಸಬ್ ಕಾಂಟ್ರಾಕ್ಟ್ ಪಡೆದಿದ್ದ ದೇವ್ ಪ್ರಕಾಶ್ ಸೊಲ್ಯೂಷನ್ಸ್ ಕೇವಲ ಬಣ್ಣ ಬಳಿದು, ಗ್ರೀಸ್ ಮಾಡಿದ್ದು ಇದಕ್ಕೆ 12 ಲಕ್ಷ ರೂಪಾಯಿ ವೆಚ್ಚ ಮಾಡಿದೆ ಎಂದು ಹೇಳಲಾಗಿದೆ. ಅಲ್ಲದೆ ತೂಗು ಸೇತುವೆಯನ್ನು ಗಟ್ಟಿಗೊಳಿಸುವ ಯಾವುದೇ ಕಾರ್ಯ ಮಾಡದಿದ್ದರೂ ಸಹ ಕೆಲಸ ಪೂರ್ಣಗೊಂಡಿದೆ ಎಂದು ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.
ಅಂದರೆ ಗುತ್ತಿಗೆ ಎರಡು ಕೋಟಿ ರೂಪಾಯಿಗಳಿಗೆ ಪಡೆದಿದ್ದರೂ ಸಹ ಕೇವಲ 12 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿದ್ದು, ಗುತ್ತಿಗೆಯ ಶೇಕಡಾ 6ರಷ್ಟು ಹಣ ಮಾತ್ರ ಇದಕ್ಕೆ ವಿನಿಯೋಗವಾಗಿದೆ. ಗುತ್ತಿಗೆದಾರರು ಮಾಡಿದ ಮಹಾ ಪ್ರಮಾದಕ್ಕೆ 135 ಮಂದಿ ಅಮಾಯಕರು ಬಲಿಯಾಗಿದ್ದಾರೆ.