
ಬೆಂಗಳೂರು: ರಾಜ್ಯದ ನಿಗಮ -ಮಂಡಳಿಗಳ ಅಧ್ಯಕ್ಷರ ನೇಮಕಾತಿಗೆ ಮುಹೂರ್ತ ಕೂಡಿಬಂದಿದ್ದು, ವಿವಿಧ ನಿಗಮ, ಮಂಡಳಿಗಳ ಪಟ್ಟಿಯನ್ನು ಫೈನಲ್ ಮಾಡಲಾಗಿದೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸುವ ಸಾಧ್ಯತೆ ಇದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಪ್ತರು ಸೇರಿದಂತೆ ಎರಡು ವರ್ಷ ಅಧಿಕಾರ ಅನುಭವಿಸಿದವರಿಗೆ ಕೋಕ್ ನೀಡಲಾಗುವುದು. ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಶಾಸಕರ ಅಧಿಕಾರವಧಿ ಮುಂದುವರೆಯಲಿದ್ದು, ಉಳಿದವರನ್ನು ಕೈ ಬಿಟ್ಟು ಸಂಘ ಪರಿವಾರ ಮತ್ತು ಹಿರಿಯ ಕಾರ್ಯಕರ್ತರಿಗೆ ಜವಾಬ್ದಾರಿ ನೀಡಲಾಗುವುದು. ಕೆಲವು ನಿಗಮ, ಮಂಡಳಿಗಳ ಅಧ್ಯಕ್ಷರ ಬದಲಾವಣೆಯ ಕುರಿತು ಇಂದು ಸಂಜೆ ವೇಳೆಗೆ ಪಟ್ಟಿ ಬಿಡುಗಡೆಯಾಗಬಹುದೆಂದು ಹೇಳಲಾಗಿದೆ.