ಬೆಂಗಳೂರು: ಸೇವಾ ದೂರು ಇತ್ಯರ್ಥಪಡಿಸುವ ಅಧಿಕಾರ ಪರಿಶಿಷ್ಟ ಜಾತಿ ಕುರಿತ ರಾಷ್ಟ್ರೀಯ ಆಯೋಗಕ್ಕೆ ಇಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಸೇವಾ ಹಿರಿತನ, ಬಡ್ತಿ ಮತ್ತಿತರ ಸೇವಾ ವಿಷಯಗಳಿಗೆ ಸಂಬಂಧಿಸಿದ ದೂರುಗಳನ್ನು ಇತ್ಯರ್ಥಪಡಿಸುವ ಅಥವಾ ಪುರಸ್ಕರಿಸುವ ಅಧಿಕಾರ ಪರಿಶಿಷ್ಟ ಜಾತಿ ಕುರಿತ ರಾಷ್ಟ್ರೀಯ ಆಯೋಗಕ್ಕೆ ಇಲ್ಲವೆಂದು ಆದೇಶದಲ್ಲಿ ಹೈಕೋರ್ಟ್ ತಿಳಿಸಿದೆ.
ಆಯೋಗದ ಕ್ರಮ ಪ್ರಶ್ನಿಸಿ ರಾಜ್ಯ ಸರ್ಕಾರ ವತಿಯಿಂದ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ಮಾನ್ಯ ಮಾಡಿದೆ. ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕ ಸದಸ್ಯ ಪೀಠ ರಾಜ್ಯ ಸರ್ಕಾರದ ಅರ್ಜಿಯನ್ನು ಮಾನ್ಯ ಮಾಡಿ ರಾಷ್ಟ್ರೀಯ ಆಯೋಗದ ಆದೇಶವನ್ನು ರದ್ದುಪಡಿಸಿದೆ.