alex Certify ಸ್ವಸಹಾಯ ಸಂಘಗಳ ಮೂಲಕ ಶಾಲೆಗಳಿಗೆ ಮೊಟ್ಟೆ, ಚಿಕ್ಕಿ ವಿತರಣೆಗೆ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಸಹಾಯ ಸಂಘಗಳ ಮೂಲಕ ಶಾಲೆಗಳಿಗೆ ಮೊಟ್ಟೆ, ಚಿಕ್ಕಿ ವಿತರಣೆಗೆ ಆದೇಶ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಸರ್ಕಾರಿ ಶಾಲೆಯ ಶಾಲಾ ಮಕ್ಕಳಿಗೆ ಸರ್ಕಾರದ ವತಿಯಿಂದ ವಾರದಲ್ಲಿ 2 ದಿನಗಳು ಮತ್ತು ಅಜೀಂ ಪ್ರೇಮ್ ಜೀ ಫೌಂಡೇಷನ್ ವತಿಯಿಂದ ವಾರದಲ್ಲಿ 4 ದಿನಗಳು ಒಟ್ಟು ವಾರದ 6 ದಿನಗಳು ಶಾಲಾ ವಿದ್ಯಾರ್ಥಿಗಳಿಗೆ ಮೊಟ್ಟೆ ಮತ್ತು ಚಿಕ್ಕಿಯನ್ನು ನೀಡುವ ಬಗ್ಗೆ ಸರ್ಕಾರವೂ ಕ್ರಮಕೈಗೊಂಡಿರುತ್ತದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಬಂಧಪಟ್ಟ ಶಾಲೆಗಳಿಗೆ ಹತ್ತಿರದ ಒಂದೊಂದು ಸ್ವ ಸಹಾಯ ಸಂಘವನ್ನು ಗುರುತಿಸಿ ಸರಬರಾಜು ಮಾಡಲು ಸೂಚಿಸಿದೆ. ಆದ್ದರಿಂದ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳ ಸ್ವ-ಸಹಾಯ ಸಂಘಗಳಿಗೆ ಮೊಟ್ಟೆ ಮತ್ತು ಚಿಕ್ಕಿಯನ್ನು ಶಾಲೆಗಳಿಗೆ ಸರಬರಾಜು ಮಾಡಲು ಸೂಕ್ತ ಸಹಕಾರ ನೀಡಿ ಕ್ರಮವಹಿಸಲು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ NRLM-ಜಿಲ್ಲಾ ಅಭಿಯಾನ ನಿರ್ವಹಣಾ ಘಟಕ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...