ಚಿಂಪಾಂಜಿ ಅಥವಾ ಗೊರಿಲ್ಲಾಗಳು ಅತ್ಯಂತ ಬುದ್ಧಿವಂತ ಪ್ರಾಣಿಗಳಾಗಿವೆ. ಇವುಗಳು ಸಂಕೀರ್ಣ ಸಮಸ್ಯೆಗಳು ಹಾಗೂ ಒಗಟುಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಕೂಡ ಹೊಂದಿವೆ. ಅಲ್ಲದೆ ಮನುಷ್ಯನ ಅನುಕರಣೆಯನ್ನು ಕೂಡ ಬಹಳ ಚೆನ್ನಾಗಿಯೇ ಮಾಡುತ್ತವೆ. ಸದ್ಯ ಇವುಗಳ ವಿಡಿಯೋ ಒಂದು ಭಾರಿ ವೈರಲ್ ಆಗಿದೆ.
ಹೌದು, ಈ ಚಿಂಪಾಂಜಿಗಳನ್ನು ಮನುಷ್ಯರಿಗೆ ತುಂಬಾ ಹತ್ತಿರವಾದವುಗಳು ಅಂತಾನೇ ಪರಿಗಣಿಸಲ್ಪಟ್ಟಿದೆ. ಒಗಟುಗಳನ್ನು ಪರಿಹರಿಸುವುದರಿಂದ ಹಿಡಿದು ಬಟ್ಟೆ ಒಗೆಯುವವರೆಗೆ ಇವುಗಳಿಗೆ ಯಾವುದೇ ಕೆಲಸ ಕಷ್ಟವಲ್ಲ ಎಂದು ಈಗಾಗಲೇ ಸಾಬೀತಾಗಿದೆ. ಅಷ್ಟೇ ಅಲ್ಲ ಇವುಗಳ ಕಪಿಚೇಷ್ಟೆ ಕೂಡ ಬಹಳ ಮುದ್ದು. ಸದ್ಯ ಇಂಡೋನೇಷ್ಯಾದ ಮೃಗಾಲಯದಲ್ಲಿ ಚಿಂಪಾಂಜಿಯ ಚೇಷ್ಟೆ ನೋಡಿದ ಜನ ಫಿದಾ ಆಗಿದ್ದಾರೆ.
ಸೊಳ್ಳೆ ಓಡಿಸೋಕೆ ಇಲ್ಲಿದೆ ಸೂಪರ್ ಮನೆಮದ್ದು
ಮಹಿಳಾ ಸಂದರ್ಶಕಿಯೊಬ್ಬರು ತಮ್ಮ ಕನ್ನಡಕವನ್ನು ಚಿಂಪಾಂಜಿ ಬಳಿ ಬೀಳಿಸಿದ್ದಾರೆ. ಇದನ್ನು ನೋಡಿದ ಚಿಂಪಾಂಜಿಯು ಕನ್ನಡಕವನ್ನು ಹಿಡಿದು ತನ್ನ ಕಣ್ಣಿಗೆ ಇಟ್ಟಿದೆ. ಇದನ್ನು ನೋಡಿದ ಪ್ರೇಕ್ಷಕರು ವ್ಹಾವ್ ಅಂತಾ ಉದ್ಘರಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ. ಅಲ್ಲದೆ ಅದಕ್ಕೆ ಹೇಗೆ ಗೊತ್ತು ಕನ್ನಡಕವನ್ನು ಕಣ್ಣಿನ ಬಳಿಯೇ ಇರಿಸಬೇಕೆಂಬುದು ಎಂಬಿತ್ಯಾದಿ ಕಮೆಂಟ್ ಗಳನ್ನು ಮಾಡಿದ್ದಾರೆ. ಏನೇ ಆಗಲಿ ಚಿಂಪಾಂಜಿಯು ಮನುಷ್ಯನನ್ನು ಅನುಕರಣೆ ಮಾಡುತ್ತದೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಂತಾಯ್ತು.