alex Certify ರಾಷ್ಟ್ರೀಯ ಉದ್ಯಾನವನ ಮರುನಾಮಕರಣ ಕುರಿತಂತೆ ಸ್ಪಷ್ಟನೆ ನೀಡಿದ ಆಸ್ಸಾಂ ಸಿಎಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಷ್ಟ್ರೀಯ ಉದ್ಯಾನವನ ಮರುನಾಮಕರಣ ಕುರಿತಂತೆ ಸ್ಪಷ್ಟನೆ ನೀಡಿದ ಆಸ್ಸಾಂ ಸಿಎಂ

ಆಸ್ಸಾಂನ ಓರಾಂಗ್​ ರಾಷ್ಟ್ರೀಯ ಉದ್ಯಾನವನದ ಹೆಸರು ಬದಲಾವಣೆ ಕುರಿತಂತೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.

ಓರಾಂಗ್​ ರಾಷ್ಟ್ರೀಯ ಉದ್ಯಾನವನಕ್ಕೆ ಮರುನಾಮಕರಣ ಮಾಡೋದಿಲ್ಲ ಬದಲಾಗಿ ಅದರ ಮೂಲ ಹೆಸರನ್ನೇ ಮತ್ತೆ ಇಡೋದಾಗಿ ಹೇಳಿದ್ದಾರೆ.

ರಾಜ್ಯದಲ್ಲಿ ಯಾವುದೇ ರಾಷ್ಟ್ರೀಯ ಉದ್ಯಾನವನಕ್ಕೆ ವ್ಯಕ್ತಿಯ ಹೆಸರನ್ನು ಇಡಲಾಗಿಲ್ಲ. ಆದರೆ 2005ರಲ್ಲಿ ಕಾಂಗ್ರೆಸ್​ ಸರ್ಕಾರ ಈ ರೀತಿ ಉದ್ಯಾನವನದ ಹೆಸರನ್ನು ಬದಲಾಯಿಸುವ ಮೂಲಕ ಸ್ಥಳೀಯರ ಭಾವನೆಗೆ ಅಗೌರವ ತಂದಿದೆ ಎಂದು ಹೇಳಿದ್ರು.

ಟ್ವಿಟರ್​ನಲ್ಲಿ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಆಸ್ಸಾಂ ಸಿಎಂ ಶರ್ಮಾ, ಓರಂಗ್ ರಾಷ್ಟ್ರೀಯ ಉದ್ಯಾನವನಕ್ಕೆ ಮರುನಾಮಕರಣ ಮಾಡುತ್ತಿಲ್ಲ. 2005ಕ್ಕೂ ಮುನ್ನ ಆಸ್ಸಾಂನ ಯಾವುದೇ ರಾಷ್ಟ್ರೀಯ ಉದ್ಯಾನವನಗಳಿಗೆ ವ್ಯಕ್ತಿಯ ಹೆಸರು ಇರಲಿಲ್ಲ. ಆದರೆ ಈ ನಿಯಮವನ್ನು ಮುರಿದ ಅಂದಿನ ಕಾಂಗ್ರೆಸ್​ ಸರ್ಕಾರ ಮಾಜಿ ಪ್ರಧಾನಿ ದಿ. ರಾಜೀವ್​ ಗಾಂಧಿ ಹೆಸರನ್ನು ಈ ಪಾರ್ಕ್​ಗೆ ಇಟ್ಟಿದೆ ಎಂದು ಬರೆದಿದ್ದಾರೆ.

ಆಸ್ಸಾಂ ಸದನದಲ್ಲಿ ರಾಜೀವ್​ ಗಾಂಧಿ ರಾಷ್ಟ್ರೀಯ ಉದ್ಯಾನವನವನ್ನು ಹುಲಿ ಸಂರಕ್ಷಿತ ಪ್ರದೇಶವಾದ ಒರಾಂಗ್​ ರಾಷ್ಟ್ರೀಯ ಉದ್ಯಾನವನ ಎಂದು ಹೆಸರು ಬದಲಾಯಿಸಲು ನಿರ್ಧರಿಸಿದ ಬಳಿಕ ಶರ್ಮಾ ಈ ಪ್ರತಿಕ್ರಿಯೆ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...