ದೃಷ್ಟಿ ಭ್ರಮಣಾ ಚಿತ್ರಗಳು ಸಾಮಾನ್ಯವಾಗಿ ನೆಟ್ಟಿಗರಿಗೆ ಭಾರೀ ಇಷ್ಟವಾದ ವಿಷಯಗಳು. ಮೆದುಳಿನ ಸಾಮರ್ಥ್ಯಕ್ಕೆ ಗಂಭೀರ ಸವಾಲೊಡ್ಡಬಲ್ಲ ಈ ಚಿತ್ರಗಳು ನಮ್ಮ ಮಾನಸಿಕ, ಬೌದ್ಧಿಕ ಹಾಗೂ ದೈಹಿಕ ಕ್ಷಮತೆಗಳನ್ನು ಪರೀಕ್ಷೆಗೊಡ್ಡಬಲ್ಲವು.
ಮಾನವನ ಕಣ್ಣುಗಳು ದೃಶ್ಯಗಳನ್ನು ವಿವಿಧ ಕೋನಗಳಿಂದ ಹಾಗೂ ದೃಷ್ಟಿಕೋನಗಳಿಂದ ನೋಡಬಲ್ಲವು. ಬಣ್ಣಬಣ್ಣದ ಚಿತ್ರಗಳ ಕ್ಲಸ್ಟರ್ ಒಂದನ್ನು ಶೇರ್ ಮಾಡಲಾಗಿದ್ದು, ಅದರಲ್ಲಿ 11 ಪ್ರಾಣಿಗಳಿವೆ.
ಇವುಗಳ ಪೈಕಿ ನಿಮ್ಮ ಕಣ್ಣಿಗೆ ಬೀಳುವ ಮೊದಲ ಪ್ರಾಣಿ ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ ಎನ್ನುವ ಕ್ಲಿಂಚರ್ ಮೂಲಕ ನೆಟ್ಟಿಗರಿಗೆ ಒಂದು ವಿನೋದಮಯ ಸವಾಲನ್ನು ಹಾಕಲಾಗಿದೆ.
ಮೊದಲು ನಿಮ್ಮ ಕಣ್ಣಿಗೆ ಸಿಂಹ ಬಿದ್ದರೆ ನಿಮ್ಮಲ್ಲಿ ನಾಯಕತ್ವದ ಗುಣಗಳು ಸಹಜವಾಗಿವೆ ಎಂದು ಅರ್ಥ. ಕೋಲಾದ ಚಿತ್ರವನ್ನು ಕಂಡರೆ ನಿಮಗೆ ತಾಳ್ಮೆ ಹಾಗೂ ಕರುಣೆಗಳಿವೆ ಎಂದರ್ಥ.
ಇದೇ ರೀತಿ ಆನೆಯನ್ನು ಮೊದಲು ನೋಡಿದರೆ ನೀವು ಉತ್ತಮ ಆಲಿಕೆದಾರರಾಗಿದ್ದು, ಭಾರೀ ತಾಳ್ಮೆವಂತರಾಗಿದ್ದೀರಿ ಎಂದರ್ಥ. ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿಷ್ಣಾತರಾದ ನಿಮಗೆ ಕುಟುಂಬ ಹಾಗೂ ಸ್ನೇಹಿತರು ಆದ್ಯತೆಯಾಗಿರುತ್ತಾರೆ.
ಬಾತುಕೋಳಿಯನ್ನು ಮೊದಲು ಕಂಡಲ್ಲಿ ನೀವು ಆಶಾವಾದಿಯಾಗಿರುತ್ತೀರಿ. ಹೇಸರುಗತ್ತೆ ಮೊದಲು ಕಣ್ಣಿಗೆ ಬಿದ್ದರೆ ನಿಮ್ಮಲ್ಲಿ ಅತ್ಯುತ್ತಮವಾದ ಹಾಸ್ಯ ಪ್ರಜ್ಞೆ ಇದೆ ಎಂದರ್ಥ. ಬೆಕ್ಕು ಮೊದಲು ನಿಮ್ಮ ಕಣ್ಣಿಗೆ ಬಿದ್ದರೆ ನೀವು ನಾಚಿಕೆ ಸ್ವಭಾವದವರೆಂದು ಅರ್ಥ.
ಒಂದು ವೇಳೆ ಹಂದಿಯನ್ನು ನೀವು ನೋಡಿದರೆ ನೀವು ತರ್ಕವಾದಿಗಳು. ಗೂಬೆ ಕಣ್ಣಿಗೆ ಮೊದಲು ಕಂಡಲ್ಲಿ ನೀವು ಆಳವಾದ ಚಿಂತಕರು. ಜಿರಾಫೆ ಮೊದಲು ಕಣ್ಣಿಗೆ ಬಿದ್ದರೆ ನೀವು ನೋಡಲು ಆಕರ್ಷಕವಾಗಿದ್ದೀರಿ ಎಂದರ್ಥ.
ಕರಡಿ ಮೊದಲು ಕಾಣಿಸಿದರೆ ನೀವು ತಾಳ್ಮೆವಂತರಾಗಿದ್ದು, ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವವರು. ಮೊದಲು ಮೊಲ ಕಂಡಲ್ಲಿ ನೀವು ಜೀವಂತಿಕೆಯುಳ್ಳ ಮಂದಿಯಾಗಿದ್ದು, ಸುತ್ತಲಿನ ಜನರನ್ನು ಒಳ್ಳೇ ಮೂಡ್‌ನಲ್ಲಿಟ್ಟಿರುತ್ತೀರಿ.