alex Certify ನೀರಿನ ಮೇಲೆ ನಡೆದಿವೆಯಾ ಕುದುರೆಗಳು….? ಇಲ್ಲಿದೆ ವೈರಲ್‌ ಫೋಟೋ ಹಿಂದಿನ ಅಸಲಿ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀರಿನ ಮೇಲೆ ನಡೆದಿವೆಯಾ ಕುದುರೆಗಳು….? ಇಲ್ಲಿದೆ ವೈರಲ್‌ ಫೋಟೋ ಹಿಂದಿನ ಅಸಲಿ ಸತ್ಯ

ಸಾಮಾಜಿಕ ಜಾಲತಾಣ ಇತ್ತೀಚೆಗೆ ಹೆಚ್ಚೆಚ್ಚು ಆಪ್ಟಿಕಲ್​ ಇಲ್ಯೂಷನ್​ ಚಿತ್ರಗಳ ಸರಕು ಬರುತ್ತಿದ್ದು, ನೆಟ್ಟಿಗರ ಆಸಕ್ತಿಯನ್ನು ಕೆರಳಿಸುತ್ತಿದೆ. ಯಾರಾದರೂ ನೀರಿನ ಮೇಲೆ ನಡೆಯುವುದನ್ನು ನೋಡಿದ್ದೀರಾ ? ಇಲ್ಲ ತಾನೆ, ಅದರಲ್ಲೂ ಕುದುರೆಗಳಂತಹ ಭಾರವಾದ ಪ್ರಾಣಿ ನೀರಿನ ಮೇಲೆ ನಡೆಯುವುದನ್ನು ನೋಡಿರಲು ಚಾನ್ಸೇ ಇಲ್ಲ. ಇದೀಗ ಬಂದಿರುವ ಆಪ್ಟಿಕಲ್​ ಇಲ್ಯೂಷನ್​ನಲ್ಲಿ ಎರಡು ಕುದುರೆಗಳು ‘ನೀರಿನ ಮೇಲೆ ನಡೆಯುತ್ತಿವೆ’ ಅಥವಾ ಹಾಗೆ ತೋರುವ ವೈರಲ್​ ವೀಡಿಯೊದ ನಂತರ ನೆಟ್ಟಿಗರು ಗೊಂದಲಕ್ಕೊಳಗಾಗಿದ್ದಾರೆ.

ಕಳೆದ ತಿಂಗಳು 58 ವರ್ಷದ ಕೆಲ್ಲಿ ರೋಜರ್ಸ್​ ಎಂಬವರು ತಮ್ಮ ಇಬ್ಬರು ಮೊಮ್ಮಕ್ಕಳೊಂದಿಗೆ ಅಮೆರಿಕದ ಅರಿಜೋನಾದ ಟೊಂಟೊ ನ್ಯಾಷನಲ್​ ಫಾರೆಸ್ಟ್​ನಲ್ಲಿರುವ ಸಾಲ್ಟ್​ ರಿವರ್​ನಲ್ಲಿ ಪ್ಯಾಡಲ್​ ಬೋರ್ಡಿಂಗ್ ಮಾಡುತ್ತಿರುವಾಗ ಈ ವಿಡಿಯೊವನ್ನು ರೆಕಾರ್ಡ್​ ಮಾಡಿದ್ದಾರೆ. ಆಕೆ ನದಿಯ ನಿಂತಿದ್ದ ಎರಡು ಕುದುರೆಗಳನ್ನು ಗಮನಿಸಿದ್ದು ಮತ್ತು ಅವುಗಳನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಲು ಮುಂದಾದಾಗ ಕುದುರೆಗಳು ನೀರಿನ ಮೇಲ್ಮೈಯಲ್ಲಿ ತೇಲುತ್ತಿರುವಂತೆ ಭಾಸವಾಗಿದೆ.

ಆಕೆ ಟಿಕ್​ಟಾಕ್​ನಲ್ಲಿ ಆಪ್ಟಿಕಲ್​ ಇಲ್ಯೂಷನ್​ ವಿಡಿಯೊವನ್ನು ಹಂಚಿಕೊಂಡಿದ್ದು, ಅಲ್ಲಿ ಅದು 8.3 ಮಿಲಿಯನ್​ ವೀಕ್ಷಣೆಗಳೊಂದಿಗೆ ವೈರಲ್​ ಆಗಿದೆ. ಅದು ತಮಾಷೆಯ ಕಾಮೆಂಟ್​ಗೂ ಮಾಡಲು ನೆಟ್ಟಿಗರನ್ನು ಪ್ರೇರೇಪಿಸಿತು.

ಕುದುರೆಗಳು ನೀರಿನ ಮೇಲೆ ನಡೆದಾಡುತ್ತಿರುವಂತೆ ತೋರುತ್ತಿರುವುದು ಹೇಗೆಂದು ಪ್ರಶ್ನೆ ಇದ್ದರೆ, ಕುದುರೆಗಳು ನಿಂತಲ್ಲೇ ನಿಂತಿದ್ದಾಗ ಮಹಿಳೆ ತನ್ನ ಪ್ಯಾಡಲ್​ ಬೋರ್ಡಿಂಗ್ ಮೂಲಕ ನದಿಯಲ್ಲಿ ತೇಲುತ್ತಿದ್ದಳು. ಚಿತ್ರವು ಆಪ್ಟಿಕಲ್​ ಇಲ್ಯೂಷನ್​ನಂತೆ ಏಕೆ ಕಾಣುತ್ತದೆ ಎಂಬುದರ ಕುರಿತು ಅನೇಕ ಸಾಮಾಜಿಕ ಜಾಲತಾಣಿಗರಿಗೆ ಅರ್ಥವಾಗದೇ ಹೋಯಿತು. ಕೆಲವರು ಸ್ವಲ್ಪ ಸಮಯ ತೆಗೆದುಕೊಂಡರು, ಇನ್ನು ಕೆಲವು ತಮಗಿದು ಅರ್ಥವಾಗಿಲ್ಲ ಎಂದೇ ಕಾಮೆಂಟ್​ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...