ನೀವು ಅದೆಷ್ಟೇ ಸುಲಭವಾಗಿ ಪಜಲ್, ಮೈಂಡ್ ಗೇಮ್ಸ್, ಸುಡೊಕುನಂತಹ ಗೇಮ್ ಗಳನ್ನು ಪರಿಹರಿಸಲಬಲ್ಲಿರಿ. ಆದರೆ, ಇಲ್ಲೊಂದು ಚಿತ್ರವಿದೆ. ಅದು ನಿಮ್ಮ ಮೆದುಳಿಗೆ ಸಾಕಷ್ಟು ಕೆಲಸ ಕೊಡಲಿದೆ. ಅದೆಂದರೆ, ಈ ಚಿತ್ರದಲ್ಲಿ ಎಷ್ಟು ಮುಖಗಳಿವೆ ಎಂದು ಪತ್ತೆ ಮಾಡುವುದು ನಿಮಗೆ ಸವಾಲಾಗಿದೆ.
ಈ ಪೇಂಟಿಂಗ್ ನಲ್ಲಿ ಒಂದಕ್ಕಿಂತ ಹೆಚ್ಚು ಮುಖಗಳಿವೆ. ಎಷ್ಟಿವೆ ಎಂಬುದನ್ನು ಪತ್ತೆ ಮಾಡುವುದಷ್ಟೆ ನಿಮ್ಮ ಕೆಲಸವಾಗಿದೆ. ಬೇವ್ ಡೂಲಿಟಲ್ ಎಂಬ ಕಲಾವಿದ ಈ ಪೇಂಟಿಂಗ್ ಅನ್ನು ರಚಿಸಿದ್ದು, ಇದಕ್ಕೆ `ದಿ ಫಾರೆಸ್ಟ್ ಹ್ಯಾಸ್ ಐಸ್’ ಎಂದು ಹೆಸರಿಸಲಾಗಿದೆ.
ಗುಡ್ಡಗಾಡು ಪ್ರದೇಶದಲ್ಲಿ ಕಲ್ಲುಗಳು, ಮರಗಳು ಮತ್ತು ಇಬ್ಬರು ಕುದುರೆ ಸವಾರರು ಇರುವಂತೆ ಚಿತ್ರದಲ್ಲಿ ಕಾಣಿಸುತ್ತದೆ. ಇನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಕಲ್ಲುಗಳ ಮೇಲೆ ಕೆಲವು ಮುಖಗಳನ್ನು ನೋಡಬಹುದಾಗಿದೆ. ಸಾಮಾನ್ಯವಾಗಿ ಈ ಚಿತ್ರದಲ್ಲಿ 4 ಮುಖಗಳನ್ನು ಕಾಣಲಾಗುತ್ತದೆ. ಆದಾಗ್ಯೂ, ನಿಮ್ಮ ಬುದ್ಧಿಮತ್ತೆ ಚುರುಕಾಗಿದ್ದರೆ, ನಿಮಗೆ ಇಂತಹ 13 ಮುಖಗಳು ಕಾಣಿಸುತ್ತವೆ.
ನೀವು ಯಶಸ್ವಿಯಾಗಿ ನಾಲ್ಕು ಮುಖಗಳನ್ನು ಪತ್ತೆ ಮಾಡಿದ್ದರೆ, ಇನ್ನಷ್ಟು ಸನಿಹಕ್ಕೆ ಹೋಗಿ ನೋಡಿದರೆ ಮತ್ತೆರಡು ಮುಖಗಳು ಕಾಣುತ್ತವೆ. ಬಲಬದಿಯಲ್ಲಿರುವ ಕಲ್ಲುಗಳಲ್ಲಿ ಇನ್ನೆರಡು ಮುಖಗಳು ಕಾಣುತ್ತವೆ. ಅದರಲ್ಲಿ ಒಂದು ಸ್ವಲ್ಪ ದೊಡ್ಡದಾಗಿದೆ.
ಇನ್ನಷ್ಟು ಮುಂದಕ್ಕೆ ಹೋದರೆ ಚಿತ್ರದಲ್ಲಿರುವ ಮರಗಳ ಮೇಲೆ ಇನ್ನೂ ನಾಲ್ಕು ಮುಖಗಳನ್ನು ತುಂಬಾ ಎಚ್ಚರಿಕೆಯಿಂದ ಬಿಡಿಸಲಾಗಿದೆ. ಇದನ್ನು ಪತ್ತೆ ಮಾಡಲು ನೀವು ಎಡ ಬದಿಯ ಮರದ ಕಡೆಗೆ ನಿಮ್ಮ ದೃಷ್ಟಿಯನ್ನು ಹಾಯಿಸಬೇಕು ಮತ್ತು ಬಲಕ್ಕೆ ತಿರುಗಬೇಕು. ಮುಖವನ್ನು ಪತ್ತೆ ಮಾಡಲು ನೀವು ಮೂಗು ಮತ್ತು ಕಣ್ಣುಗಳನ್ನು ಪತ್ತೆ ಮಾಡಿದರೆ ನಿಮಗೆ ದೊಡ್ಡ ಮುಖ ಕಾಣಸಿಗುತ್ತದೆ.
ಅದೇ ರೀತಿ, ಅತ್ಯಂತ ಸೂಕ್ಷ್ಮಮತಿಯಿಂದ ವೀಕ್ಷಿಸಿದರೆ ನಿಮಗೆ ಎಲ್ಲಾ 13 ಮುಖಗಳು ನಿಮಗೆ ಕಾಣಿಸುತ್ತವೆ.