ಆಪ್ಟಿಕಲ್ ಭ್ರಮೆಗಳು ಈ ದಿನಗಳಲ್ಲಿ ವೇಳೆ ಕಳೆಯಲು ಬಹುದೊಡ್ಡ ವೇದಿಕೆಯಾಗಿದೆ. ಮನರಂಜನೆಯ ಜೊತೆಗೆ ಬುದ್ಧಿಗೆ ಒಂದಿಷ್ಟು ಸವಾಲಯಗಳನ್ನೂ ಇದು ಹಾಕುತ್ತದೆ. ಇದಲ್ಲದೆ, ಆಪ್ಟಿಕಲ್ ಭ್ರಮೆಗಳು ವೀಕ್ಷಣಾ ಕೌಶಲ್ಯವನ್ನೂ ವೃದ್ಧಿಸುತ್ತದೆ.
ಅಂಥದ್ದೇ ಒಂದು ಚಿತ್ರ ಇಲ್ಲಿದೆ. ಇಪ್ಪತ್ತು ಸೆಕೆಂಡುಗಳಲ್ಲಿ ಎರಡು ಚಿತ್ರಗಳ ನಡುವಿನ ಐದು ವ್ಯತ್ಯಾಸಗಳನ್ನು ಗುರುತಿಸುವುದು ನಿಮಗೆ ಇರುವ ಸವಾಲು.
ಎರಡು ಚಿತ್ರಗಳಲ್ಲಿ ಸ್ಟೇಷನರಿ ವಸ್ತುಗಳು, ಕೆಲವು ಎಲೆಕ್ಟ್ರಾನಿಕ್ಸ್ ಮತ್ತು ಮೊಲದ ಜೊತೆ ಸ್ಟಡಿ ಟೇಬಲ್ ಮೇಲೆ ಕುಳಿತಿರುವ ಹುಡುಗಿಯನ್ನು ನೋಡಬಹುದು. ಈ ಎರಡೂ ಚಿತ್ರಗಳು ಒಂದೇ ರೀತಿ ಎನಿಸಿದರೂ ಒಟ್ಟು ಐದು ವ್ಯತ್ಯಾಸಗಳಿವೆ. 20 ಸೆಕೆಂಡುಗಳ ಕಾಲಮಿತಿಯೊಳಗೆ ಅವೆಲ್ಲವನ್ನೂ ಗುರುತಿಸುವ ಸವಾಲು ವೀಕ್ಷಕರ ಮುಂದಿದೆ.
ನಿಮ್ಮಿಂದ ಇದು ಸಾಧ್ಯವಾಯಿತೆ? ನೋಡಲು ಸುಲಭ ಎನಿಸಿದರೂ ಕಷ್ಟವಿದೆಯಲ್ಲವೆ? ಚಿಂತಿಸಬೇಡಿ. ನಿಮಗೆ ಇದು ಗುರುತಿಸಲು ಸಾಧ್ಯವಾಗಿಲ್ಲವಾದರೆ ನಾವೂ ನಿಮಗಾಗಿ ಉತ್ತರಿಸುತ್ತೇವೆ.