ದೃಷ್ಟಿ ಭ್ರಮಣೆಯ ಚಿತ್ರಗಳು ತಲೆಗೆ ಒಳ್ಳೆ ಕೆಲಸ ಕೊಟ್ಟು ನಮ್ಮ ಸೂಕ್ಷ್ಮ ಗ್ರಹಿಕೆಯನ್ನು ಚುರುಕುಗೊಳಿಸುತ್ತವೆ.
ನಾವೆಲ್ಲಾ ಬಾಲ್ಯದಲ್ಲಿ ಟೆನಿಸ್ ಬಾಲ್‌ನಲ್ಲಿ ಕ್ರಿಕೆಟ್ ಆಡುವ ವೇಳೆ ಹುಲ್ಲುಗಾವಲಿನಲ್ಲಿ ಚೆಂಡು ಕಾಣೆಯಾದಾಗ ಅದನ್ನು ಪತ್ತೆ ಮಾಡಲು ನಮ್ಮ ದೃಷ್ಟಿ ಸಾಮರ್ಥ್ಯವನ್ನೆಲ್ಲಾ ಬಳಸಿದ ನೆನಪುಗಳು ನಮ್ಮೊಂದಿಗೆ ಸದಾ ಇರಲಿವೆ.
ಇಂಥದ್ದೇ ಸನ್ನಿವೇಶ ನೆನಪಿಸುವ ಚಿತ್ರವೊಂದು ನೆಟ್‌ನಲ್ಲಿ ವೈರಲ್ ಆಗಿದ್ದು, ಚಿತ್ರದಲ್ಲಿರುವ ಟೆನಿಸ್ ಚೆಂಡನ್ನು ಪತ್ತೆ ಮಾಡುವ ಸವಾಲೆಸೆದು ಪೋಸ್ಟ್ ಮಾಡಲಾಗಿದೆ.
ನೀವೂ ಒಮ್ಮೆ ನಿಮ್ಮ ದೃಷ್ಟಿ ಕ್ಷಮತೆಗೊಂದು ಸವಾಲನ್ನು ಎಸೆದುಕೊಂಡು ಚೆಂಡನ್ನು ಪತ್ತೆ ಮಾಡಬಲ್ಲಿರಾ? ನಾಲ್ಕು ಸೆಕೆಂಡ್‌ಗಳಲ್ಲಿ ನಿಮಗೆ ಚೆಂಡನ್ನು ಪತ್ತೆ ಮಾಡಲು ಸಾಧ್ಯವೇ?
ಒಂದು ವೇಳೆ ನಿಮಗೆ ಚೆಂಡು ಕಾಣಲಿಲ್ಲವಾದರೆ, ಚಿತ್ರದ ಎಡಭಾಗವನ್ನು ಸೂಕ್ಷ್ಮವಾಗಿ ಅವಲೋಕಿಸಿ. ಹಾಗೂ ಆಗಿಲ್ಲವಾದಲ್ಲಿ, ಚೆಂಡಿನ ಸ್ಥಳವನ್ನು ಗುರುತಿಸಿರುವ ಮತ್ತೊಂದು ಚಿತ್ರವನ್ನೊಮ್ಮೆ ಗಮನಿಸಿ.