ಬುದ್ಧಿಗೆ ಗುದ್ದು ನೀಡುವ ಹಲವಾರು ರೀತಿಯ ಆಟಗಳು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಸಿದ್ಧಿಯಾಗಿವೆ. ಅವುಗಳಲ್ಲಿ ಒಂದು ಆಪ್ಟಿಕಲ್ ಇಲ್ಯೂಷನ್. ಅಂಥದ್ದೇ ಒಂದು ಫೋಟೋ ನೆಟ್ಟಿಗರಿಗೆ ಚಾಲೆಂಜ್ ಕೊಟ್ಟಿದೆ. ಈ ಚಿತ್ರ ಭಾರಿ ವೈರಲ್ ಆಗುತ್ತಿದ್ದು, ಜನರ ತಲೆ ಕೆಡಿಸುವಂತಿದೆ.
ಈ ಚಿತ್ರದಲ್ಲಿ ಮಸಾಲೆಗಳು ಮತ್ತು ಪಾತ್ರೆಗಳ ಜಾಡಿಗಳೊಂದಿಗೆ ಹಲವಾರು ಕಪಾಟುಗಳನ್ನು ನೋಡಬಹುದು. 12 ಸೆಕೆಂಡುಗಳಲ್ಲಿ ಚಿತ್ರದಲ್ಲಿ ಅಡಗಿರುವ ಚಾಕುವನ್ನು ಕಂಡುಹಿಡಿಯುವುದು ವೀಕ್ಷಕರ ಗುರಿಯಾಗಿದೆ.
ನೀವು ಕೆಲಸವನ್ನು ಎಷ್ಟು ಬೇಗನೆ ಸಾಧಿಸಬಹುದು ಎಂಬುದನ್ನು ಅಳೆಯಲು ಸಾಮಾನ್ಯವಾಗಿ ಸಮಯದ ಮಿತಿ ಇರುತ್ತದೆ. ಚಾಕುವನ್ನು ಹುಡುಕಲು ಹನ್ನೆರಡು ಸೆಕೆಂಡುಗಳ ಕಾಲದ ಮಿತಿಯನ್ನು ನೀಡಲಾಗಿದೆ. ಕಪಾಟುಗಳು ಸ್ಪಷ್ಟವಾಗಿ ಗೋಚರಿಸುವುದರಿಂದ, ಲೈನ್ ವೈಸ್ ಅಥವಾ ಕಾಲಮ್ ವೈಸ್ ಆಯ್ಕೆ ಮಾಡಿ ಉತ್ತರ ಕಂಡುಕೊಳ್ಳಬಹುದು.
ಉತ್ತರ ಇಲ್ಲಿದೆ ನೋಡಿ. ಎರಡನೇ ಕಾಲಮ್‌ನಲ್ಲಿ ಬಲಬದಿಯ ಶೆಲ್ಫ್‌ನಲ್ಲಿರುವ ಹ್ಯಾಂಡಲ್‌ನಿಂದ ಲಂಬವಾಗಿ ಕೆಳಮುಖವಾಗಿ ಚಾಕುವನ್ನು ಕಾಣಬಹುದು. ನಿಮಗೆ ಉತ್ತರ ಸಿಕ್ಕಿತೆ?