ಬುದ್ಧಿಗೆ ಗುದ್ದು ನೀಡುವ ಹಲವಾರು ರೀತಿಯ ಆಟಗಳು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಸಿದ್ಧಿಯಾಗಿವೆ. ಅವುಗಳಲ್ಲಿ ಒಂದು ಆಪ್ಟಿಕಲ್ ಇಲ್ಯೂಷನ್. ಅಂಥದ್ದೇ ಒಂದು ಫೋಟೋ ನೆಟ್ಟಿಗರಿಗೆ ಚಾಲೆಂಜ್ ಕೊಟ್ಟಿದೆ. ಈ ಚಿತ್ರ ಭಾರಿ ವೈರಲ್ ಆಗುತ್ತಿದ್ದು, ಜನರ ತಲೆ ಕೆಡಿಸುವಂತಿದೆ.
ಇಲ್ಲಿ ನೀವು ಕಿತ್ತಳೆ ಬಣ್ಣದ ಕಾಡನ್ನು ಕಾಣಬಹುದು. ವಸಂತ ಋತುವಿನಂತೆ ಕಾಣುವ ಈ ಅರಣ್ಯ ಕಿತ್ತಳೆ ಬಣ್ಣದಲ್ಲಿದ್ದು, ಇದರ ನಡುವೆ ಸಿಂಹವು ಮರೆಯಾಗಿದೆ. ಮರಗಳ ಮೇಲೆ ಮತ್ತು ನೆಲದ ಮೇಲೆ ಕಿತ್ತಳೆ ಎಲೆಗಳನ್ನು ಹೊಂದಿರುವ ಅಸಂಖ್ಯಾತ ಮರಗಳು ಇವೆ, ಆದರೆ ಇವೆಲ್ಲವೂ ವೀಕ್ಷಕರಿಗೆ ಅಡ್ಡಿಪಡಿಸುತ್ತವೆ ಮತ್ತು ಸಿಂಹವನ್ನು ಹುಡುಕಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
ಈಗ ಇರುವ ಸವಾಲು ಎಂದರೆ ನೀವು ಚಿತ್ರವನ್ನು ನೋಡಿ ಅದರಲ್ಲಿರುವ ಸಿಂಹವನ್ನು ಕಂಡುಹಿಡಿಯಬೇಕು. ಸಿಂಹ ಸಿಕ್ಕಿತಾ ನಿಮಗೆ ಸಾಧ್ಯವಾಗದಿದ್ದರೂ, ಚಿಂತಿಸಬೇಕಾಗಿಲ್ಲ.ನಾವು ನಿಮಗಾಗಿ ಉತ್ತರ ನೀಡುತ್ತೇವೆ.
ಸಿಂಹವನ್ನು ಕಾಡಿನ ಬಲಭಾಗದಲ್ಲಿ ಕಾಣಬಹುದು ಮತ್ತು ನೀವು ಕಿತ್ತಳೆ ಎಲೆಗಳ ಮೂಲಕ ಸ್ಕ್ಯಾನ್ ಮಾಡಿದಾಗ ಬಣ್ಣದಲ್ಲಿ ಸ್ವಲ್ಪ ಬದಲಾವಣೆ ಇರುವುದನ್ನು ನೋಡಬಹುದು. ಇಲ್ಲಿ ಅದನ್ನು ತೋರಿಸಲಾಗಿದೆ ನೋಡಿ, ಎಷ್ಟು ಸುಲಭ ಅಲ್ಲವೆ?