ಗೊಂದಲಮಯ ಚಿತ್ರವನ್ನು ನೀಡಿ ಅದರಲ್ಲಿ ವಸ್ತು ಒಂದನ್ನು ಪತ್ತೆಹಚ್ಚುವ ಆಪ್ಟಿಕಲ್ ಪಿಕ್ಚರ್ಸ್ ಟ್ರೆಂಡ್ ಹೆಚ್ಚಾಗಿದೆ. ಬುದ್ಧಿಗೆ ಗುದ್ದು ನೀಡಲು ಇಂಥ ಹಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಹಲವರು ಇವುಗಳನ್ನು ಇಷ್ಟಪಡುತ್ತಾರೆ.
ಅಂಥದ್ದೇ ಒಂದು ಚಿತ್ರ ಇಲ್ಲಿದೆ. ಹೂವುಗಳ ರಾಶಿಗಳುಳ್ಳ ಚಿತ್ರವನ್ನು ಇಲ್ಲಿ ಕಾಣಬಹುದು. ಚಿತ್ರದಲ್ಲಿ, ಹೂವುಗಳ ರಾಶಿಯ ನಡುವೆ ಪುಟ್ಟ ಹೃದಯವೊಂದು ಅಡಗಿ ಕುಳಿತಿದೆ. ಅದನ್ನು ನೀವು ಕಂಡುಹಿಡಿಯಬೇಕು. ಸವಾಲಿನ ವಿಷಯವೆಂದರೆ ನೀವು ಅದನ್ನು 15 ಸೆಕೆಂಡುಗಳಲ್ಲಿ ಮಾತ್ರ ಗುರುತಿಸಬೇಕು. ಚಿತ್ರದತ್ತ ಎಷ್ಟೇ ಕಣ್ಣು ಹಾಯಿಸಿದರೂ ಕೊಟ್ಟ ಕಾಲಮಿತಿಯೊಳಗೆ ಬಹುತೇಕರಿಗೆ ಪುಟ್ಟ ಹೃದಯ ಕಾಣಿಸುವುದೇ ಇಲ್ಲ ಅಲ್ಲವೆ?
ಆದ್ದರಿಂದ, ಅದನ್ನು ಸುಲಭವಾಗಿ ಹುಡುಕಲು ನಿಮಗೆ ಸಹಾಯ ಮಾಡುತ್ತಿದ್ದೇವೆ. ನಸುಗೆಂಪು ಮತ್ತು ನೇರಳೆ ಹೂವುಗಳ ಹಿಂದೆ ಚಿತ್ರದ ಮಧ್ಯಭಾಗವನ್ನು ಹತ್ತಿರದಿಂದ ನೋಡಿ. ಒಂದೇ ರೀತಿಯ ಬಣ್ಣದ ಹೂವುಗಳ ನಡುವೆ ಮರೆಮಾಚುವ ಸಣ್ಣ ಗುಲಾಬಿ ಬಣ್ಣದ ಹೃದಯವನ್ನು ನೀವು ನೋಡಬಹುದು. ಇಲ್ಲಿ ಅದನ್ನು ತೋರಿಸಲಾಗಿದೆ ನೋಡಿ.