ಗೊಂದಲಮಯ ಚಿತ್ರವನ್ನು ನೀಡಿ ಅದರಲ್ಲಿ ವಸ್ತು ಒಂದನ್ನು ಪತ್ತೆ ಹಚ್ಚುವ ಆಪ್ಟಿಕಲ್ ಪಿಕ್ಚರ್ಸ್ ಟ್ರೆಂಡ್ ಹೆಚ್ಚಾಗಿದೆ. ಬುದ್ಧಿಗೆ ಗುದ್ದು ನೀಡಲು ಇಂಥ ಹಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಹಲವರು ಇವುಗಳನ್ನು ಇಷ್ಟಪಡುತ್ತಾರೆ.
ಅಂಥದ್ದೇ ಒಂದು ಚಿತ್ರ ಇಲ್ಲಿದೆ. ಈ ಚಿತ್ರದಲ್ಲಿ ದಟ್ಟ ಕಾಡಿನ ನಡುವೆ ಮಹಿಳೆಯ ಮುಖವನ್ನು ಹುಡುಕುವ ಪ್ರಯತ್ನ ಮಾಡುವಿರಾ? ಅದನ್ನು ಗುರುತಿಸುವುದು ಸುಲಭವಲ್ಲ. 10 ಸೆಕೆಂಡುಗಳಲ್ಲಿ ಅದನ್ನು ಕಂಡುಹಿಡಿಯುವ ಸವಾಲನ್ನು ನೀವು ತೆಗೆದುಕೊಳ್ಳುತ್ತೀರಾ?
ಚಿತ್ರದತ್ತ ಎಷ್ಟೇ ಕಣ್ಣು ಹಾಯಿಸಿದರೂ ಕೊಟ್ಟ ಕಾಲಮಿತಿಯೊಳಗೆ ಬಹುತೇಕರು ದಟ್ಟ ಕಾಡಿನ ನಡುವೆ ಮಹಿಳೆಯ ಮುಖವನ್ನು ಹುಡುಕುವುದು ಕಷ್ಟವೇ. ಆದ್ದರಿಂದ, ಅದನ್ನು ಸುಲಭವಾಗಿ ಹುಡುಕಲು ನಿಮಗೆ ಸಹಾಯ ಮಾಡುತ್ತಿದ್ದೇವೆ. ನೀವು ಮೇಲಿನ ಬಲ ಮೂಲೆಯಲ್ಲಿ ನೋಡಿದರೆ, ಮಹಿಳೆಯ ಮುಖವು ಸ್ಪಷ್ಟವಾಗಿ ಗೋಚರಿಸುತ್ತದೆ. ಆದಾಗ್ಯೂ, ಅದು ತಲೆಕೆಳಗಾಗಿದೆ ಎಂಬುದನ್ನು ನೀವು ಗಮನಿಸಿ.