ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಈಚಿನ ದಿನಗಳಲ್ಲಿ ಇಂಟ್ರಸ್ಟಿಂಗ್ ರೀತಿಯಲ್ಲಿ ವೈರಲ್ ಆಗಿದ್ದು, ನೆಟಿಜನ್ ಗಳು ತಲೆ ಕೆರೆದುಕೊಳ್ಳುವಂತೆ ಮಾಡಿದೆ.
ಇದು ಚಿತ್ರ ಒಗಟು ಅಥವಾ ಚಿತ್ರಕಲೆಯೊಳಗೆ ಮರೆಮಾಡಲಾಗಿರುವ ಯಾವುದಾದರೂ ಆಪ್ಟಿಕಲ್ ಭ್ರಮೆಗಳು ಉಂಟು ಮಾಡುತ್ತಿದ್ದು ವಿನೋದಮಯವಾಗಿರುತ್ತವೆ.
ಆಪ್ಟಿಕಲ್ ಭ್ರಮೆ ನಿಮ್ಮ ಮುಂದೆ ಪ್ರಸ್ತುತಪಡಿಸಲಾದ ಚಿತ್ರದ ನಿಮ್ಮ ಗ್ರಹಿಕೆಯನ್ನು ಪರೀಕ್ಷಿಸುವುದು ಮತ್ತು ನಿಮ್ಮ ವೀಕ್ಷಣಾ ಕೌಶಲ್ಯಗಳನ್ನು ಪರೀಕ್ಷಿಸುವುದಾಗಿರುತ್ತದೆ.
ಇದೀಗ ದಟ್ಟವಾದ ಕಾಡಿನ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕಣ್ಣಿಗೆ ಕಾಣದಂತಿರುವ ಪುಟ್ಟ ಹಕ್ಕಿಯನ್ನು ಹುಡುಕಲು ಜನರಿಗೆ ಸವಾಲು ಹಾಕಲಾಗಿದೆ. ಇದಕ್ಕೆ ಉತ್ತರ ಕೆಳಗಿದೆ. ಆದರೆ ಅದಕ್ಕೂ ಮುನ್ನ ನೀವೂ ಹುಡುಕಲು ಪ್ರಯತ್ನಿಸಿ.
ಮಧ್ಯದಲ್ಲಿರುವ ಮರದ ತುದಿಯನ್ನು ಸೂಕ್ಷ್ಮವಾಗಿ ಗಮನಿಸಿ, ನೀಲಿ ಬಣ್ಣದ ಹಕ್ಕಿಯೊಂದು ಮರದ ಕೊಂಬೆಯೊಂದರಲ್ಲಿ ಕುಳಿತಿದೆ ಮತ್ತು ಅದನ್ನು ಸುಲಭವಾಗಿ ಗುರುತಿಸಬಹುದಾಗಿದೆ.