alex Certify 10 ಸೆಕೆಂಡುಗಳಲ್ಲಿ ನಿಮ್ಮ ಸ್ವಭಾವ ತಿಳಿಸುತ್ತಂತೆ ಈ ಅಪ್ಟಿಕಲ್‌ ಇಲ್ಯೂಶನ್‌ ಚಿತ್ರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

10 ಸೆಕೆಂಡುಗಳಲ್ಲಿ ನಿಮ್ಮ ಸ್ವಭಾವ ತಿಳಿಸುತ್ತಂತೆ ಈ ಅಪ್ಟಿಕಲ್‌ ಇಲ್ಯೂಶನ್‌ ಚಿತ್ರ…!

ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಪ್ಟಿಕಲ್​ ಇಲ್ಯೂಷನ್​ ಮತ್ತು ಒಗಟುಗಳು ಬಳಕೆದಾರರ ಆಸಕ್ತಿಯನ್ನು ಕೆರಳಿಸುತ್ತವೆ. ಅವುಗಳನ್ನು ಪರಿಹರಿಸಲು ಅಥವಾ ಹುಡುಕಾಡಲು ಪ್ರಾರಂಭಿಸಿದ ತಕ್ಷಣ ಹೊಸದೊಂದು ಕೌಶಲ್ಯ ಚುರುಕುಗೊಳ್ಳುತ್ತದೆ.

ಈಗ ಹೊಸದಾಗಿ ಕಾಣಿಸಿಕೊಂಡಿರುವ ಆಪ್ಟಿಕಲ್​ ಇಲ್ಯೂಷನ್​ ಚಿತ್ರದಲ್ಲಿ ನಮ್ಮ ಐಕ್ಯೂ ಸುಧಾರಿಸುತ್ತೇವೆ, ನಮ್ಮ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ತಿಳಿದುಕೊಳ್ಳುವಂತಿದೆ.

ಈ ಆಪ್ಟಿಕಲ್​ ಇಲ್ಯೂಷನ್​, ಉದ್ಯಾನವನದಲ್ಲಿರುವ ನೇರಳೆ ಮರದ ಚಿತ್ರದ್ದಾಗಿದೆ. ಇಡೀ ಆ ಪರಿಸರ ಹಸಿರು ಹುಲ್ಲಿನೊಂದಿಗೆ ಕಾಣಿಸುತ್ತದೆ. ಆದರೆ ಬ್ಯಾಕ್ ಗ್ರೌಂಡ್​ನಲ್ಲಿ ಹಳದಿ ಮರಗಳು ಇವೆ. ಈ ಮರದ ಕೊಂಬೆಗಳು ಮುಖದ ಆಕಾರವನ್ನು ರೂಪಿಸುತ್ತವೆ. ಮರ ಮತ್ತು ಮುಖವು ಎರಡು ಘಟಕಗಳಾಗಿದ್ದು, ಇಡೀ ಚಿತ್ರವನ್ನು ರಿಜಿಸ್ಟರ್​ ಮಾಡಿಕೊಳ್ಳಲು 10 ಸೆಕೆಂಡುಗಳನ್ನು ನೀಡಲಾಗುತ್ತದೆ. ಮೊದಲು ನೋಡುವ ಮತ್ತು ರಿಜಿಸ್ಟರ್​ ಮಾಡುವ ಆಧಾರದ ಮೇಲೆ, ವ್ಯಕ್ತಿತ್ವದ ಬಗ್ಗೆ ತಿಳಿಸಿಕೊಡುತ್ತದೆ ಎಂದು ಹೇಳಲಾಗಿದೆ.

ಮೊದಲು ಮರವನ್ನು ನೋಡಿದರೆ, ನೀವು ಜೀವನದಲ್ಲಿ ಲವಲವಿಕೆ ಹೊಂದಿರುವ, ತೃಪ್ತಿ ಹೊಂದಿದ ವ್ಯಕ್ತಿ. ನಿಮ್ಮ ಪಾಲಿಗೆ ಬಂದದ್ದರಲ್ಲಿ ನೀವು ಸಂತೋಷವಾಗಿರುತ್ತೀರಿ ಮತ್ತು ಕೊರಗುವುದರಿಂದ ದೂರವಿರುತ್ತೀರಿ. ನೀವು ಹೊಂದಿರದ ವಸ್ತುಗಳನ್ನು ಬೆನ್ನಟ್ಟುವ ಬದಲು ನೀವು ಯಾವಾಗಲೂ ನಿಮ್ಮಲ್ಲಿರುವುದನ್ನು ಕೇಂದ್ರೀಕರಿಸುತ್ತೀರಿ ಎಂದು ಸೂಚಿಸುತ್ತದೆ.

ನೀವು ಮೊದಲು ಮುಖವನ್ನು ನೋಡಿದರೆ, ನೀವು ಕ್ಲಾಸಿಕ್​ ಓವರ್​ ಥಿಂಕರ್​. ನೀವು ಯಾವಾಗಲೂ ಜೀವನದಲ್ಲಿ ಹೆಚ್ಚಿನದನ್ನು ಬಯಸುತ್ತೀರಿ. ಇದು ಕೆಲವೊಮ್ಮೆ ನಿಮ್ಮನ್ನು ಹೆಚ್ಚು ಯೋಚಿಸಿ ತೊಂದರೆಗೆ ಸಿಲುಕಿಸುತ್ತದೆ, ನಿಮ್ಮ ಪ್ರಯತ್ನಗಳನ್ನು ತಪ್ಪು ದಿಕ್ಕಿನಲ್ಲಿ ಇರಿಸಲು ಕಾರಣವಾಗುತ್ತದೆ. ಇದಕ್ಕೆ ಪರಿಹಾರವೆಂದರೆ ಸ್ವಲ್ಪ ಸಮಯ ವಿರಾಮ ತೆಗೆದುಕೊಂಡು ಇಲ್ಲದಿದ್ದರ ಮೇಲೆ ಕೇಂದ್ರೀಕರಿಸುವ ಬದಲು ಇರುವುದರ ಮೇಲೆ ಕೇಂದ್ರೀಕರಿಸುವುದು ಸೂಕ್ತವಾದೀತು. ನೀವು ಯಾವಾಗಲೂ ನಿಮ್ಮ ಆರಾಮದಿಂದ ನಿಮ್ಮನ್ನು ದೂರ ಇಟ್ಟುಕೊಳ್ಳುವಂತಾಗಿ ಹೆಚ್ಚು ಪ್ರಯೋಜನಕಾರಿಯಾಗುವುದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...