ನವದೆಹಲಿ: ಹೊಸ ಪಿಂಚಣಿ ಯೋಜನೆ -ಎನ್‌ಪಿಎಸ್ ಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಹುಡುಕುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ತಿಳಿಸಿದ್ದಾರೆ.
ಎನ್‌ಪಿಎಸ್ ಬದಲಿಗೆ ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ನೌಕರರು ಹೋರಾಟ ನಡೆಸುತ್ತಿದ್ದಾರೆ. ಬಿಜೆಪಿಯೇತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯ ಸರ್ಕಾರಗಳು ಈಗಾಗಲೇ ಒಪಿಎಸ್ ಜಾರಿಗೆ ತಂದಿವೆ.
ಒಪಿಎಸ್ ಜಾರಿ ಮತ್ತು ಎನ್.ಪಿ.ಎಸ್. ಸಮಸ್ಯೆಗಳ ಬಗೆಹರಿಸುವಂತೆ ನೌಕರರ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಎನ್‌ಪಿಎಸ್ ಪರಿಶೀಲಿಸಿ ಬದಲಾವಣೆ ಮಾಡಲು ಶಿಫಾರಸು ಮಾಡುವ ಸಲುವಾಗಿ ಆರ್ಥಿಕ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅಧ್ಯಕ್ಷತೆಯಲ್ಲಿ ಕಳೆದ ವರ್ಷ ಹಣಕಾಸು ಸಚಿವಾಲಯ ಸಮಿತಿ ರಚಿಸಿದೆ. ಈ ಸಮಿತಿ ಗಮನಾರ್ಹ ಪ್ರಗತಿ ಮಾಡಿದೆ ಎಂದು ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ತಿಳಿಸಿದ್ದಾರೆ.
ಸರ್ಕಾರಿ ನೌಕರರಿಗೆ ಒಪಿಎಸ್ ನಡಿ ತಮ್ಮ ಕೊನೆಯ ಸಂಬಳ ಅರ್ಧದಷ್ಟು ಮೊತ್ತ ಪಿಂಚಣಿ ರೂಪದಲ್ಲಿ ಸಿಗುತ್ತಿತ್ತು. ಸರ್ಕಾರ ಡಿಎ ಹೆಚ್ಚಳ ಮಾಡಿದಾಗ ಪಿಂಚಣಿ ಮೊತ್ತವೂ ಏರಿಕೆಯಾಗುತ್ತಿತ್ತು.