alex Certify ರಾಷ್ಟ್ರೀಯ ಲಾಂಛನದಲ್ಲಿ ಆಕ್ರಮಣಕಾರಿ ಸಿಂಹ; ಪ್ರತಿಪಕ್ಷಗಳ ತಗಾದೆ, ಮೋದಿ ವಿರುದ್ಧ ಕಿಡಿ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಷ್ಟ್ರೀಯ ಲಾಂಛನದಲ್ಲಿ ಆಕ್ರಮಣಕಾರಿ ಸಿಂಹ; ಪ್ರತಿಪಕ್ಷಗಳ ತಗಾದೆ, ಮೋದಿ ವಿರುದ್ಧ ಕಿಡಿ !

ಹೊಸ ಸಂಸತ್ತು ಕಟ್ಟಡದ ಛಾವಡಿ‌ ಮೇಲೆ ಬೃಹತ್ತಾದ ದೇಶದ ಲಾಂಛನವನ್ನು ಪ್ರಧಾನಿ ಅನಾವರಣ ಮಾಡಿದ ಬೆನ್ನಲ್ಲೇ ಪ್ರತಿಪಕ್ಷಗಳು ಪ್ರಧಾನಿ‌ ನರೇಂದ್ರ ಮೋದಿ ವಿರುದ್ಧ ಮುಗಿಬಿದ್ದಿವೆ.

ರಾಷ್ಟ್ರೀಯ ಲಾಂಛನವನ್ನು ವಿರೂಪಗೊಳಿಸಲಾಗಿದೆ ಎಂದು ವಿವಿಧ ವಿರೋಧ ಪಕ್ಷಗಳು ಆರೋಪಿಸಿವೆ. ಲಾಂಛನದಲ್ಲಿ “ಸುಂದರವಾದ ಮತ್ತು ಗೌರವಾನ್ವಿತ ಆತ್ಮವಿಶ್ವಾಸ”ದ ಪ್ರತೀಕದಂತಿದ್ದ ಸಿಂಹಗಳನ್ನು ಆಕ್ರಮಣಕಾರಿ ಭಂಗಿಯಲ್ಲಿರುವಂತೆ ಬಳಸಲಾಗಿದೆ, ತಕ್ಷಣ ಬದಲಾವಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ನರೇಂದ್ರ ಮೋದಿ ಜೀ, ದಯವಿಟ್ಟು ಸಿಂಹದ ಮುಖವನ್ನು ಗಮನಿಸಿ. ಅದು ಮಹಾನ್ ಸಾರನಾಥದ ಪ್ರತಿಮೆಯನ್ನು ಪ್ರತಿನಿಧಿಸುತ್ತಿರಲಿ ಅಥವಾ ಸಿಂಹದ ವಿಕೃತ ಆವೃತ್ತಿಯಾಗಿರಲಿ. ದಯವಿಟ್ಟು ಅದನ್ನು ಪರಿಶೀಲಿಸಿ ಮತ್ತು ಸರಿಪಡಿಸಿ ಎಂದು ಸಂಸದ, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಆಗ್ರಹಿಸಿದ್ದಾರೆ.

ಮೋದಿ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಕಾರ್ಯಕ್ರಮಕ್ಕೆ ವಿರೋಧ ಪಕ್ಷದ ನಾಯಕರನ್ನು ಆಹ್ವಾನಿಸಿಲ್ಲ ಎಂದು ಪ್ರತಿಪಕ್ಷಗಳನ್ನು ದೂರ ಇಟ್ಟಿದ್ದಾರೆಂದು ಸಹ ಟೀಕಿಸಿವೆ.

ಅನಗತ್ಯವಾಗಿ ಆಕ್ರಮಣಕಾರಿ ಸಿಂಹ ಬಳಸಲಾಗಿದೆ,‌ ಇದು ಅಸಮಂಜಸವಾಗಿದೆ. ಅವಮಾನ ! ಕೂಡಲೇ ಅದನ್ನು ಬದಲಾಯಿಸಿ ಎಂದು ತೃಣಮೂಲ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಜವಾಹರ್ ಸರ್ಕಾರ್ ಅವರು ಟ್ವಿಟರ್‌ನಲ್ಲಿ ರಾಷ್ಟ್ರೀಯ ಲಾಂಛನದ ಎರಡು ವಿಭಿನ್ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಇತಿಹಾಸಕಾರ ಎಸ್. ಇರ್ಫಾನ್ ಹಬೀಬ್ ಅವರು ಹೊಸ ಸಂಸತ್ತಿನ ಕಟ್ಟಡದ ಮೇಲೆ ರಾಷ್ಟ್ರೀಯ ಲಾಂಛನವನ್ನು ಅನಾವರಣಗೊಳಿಸಿರುವುದನ್ನು ವಿರೋಧಿಸಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...