ನವದೆಹಲಿ: ಕೋರ್ಸ್ ಅವಧಿ ಎಷ್ಟೇ ಇದ್ದರೂ ಕೂಡ ವಿದ್ಯಾರ್ಥಿಗಳು ಅಗತ್ಯವಾದ ಕ್ರೆಡಿಟ್(ಅಂಕ) ಪಡೆದಿದ್ದರೆ ಕೋರ್ಸ್ ಅವಧಿಯನ್ನು ಪರಿಗಣಿಸದೇ ಸಂಬಂಧಿಸಿದ ಪದವಿ ನೀಡಲು ಯುಜಿಸಿ ಸಮಿತಿ ಶಿಫಾರಸು ಮಾಡಿದೆ.
ಪದವಿ ಡಿಪ್ಲೋಮಾ ಅಥವಾ ಸರ್ಟಿಫಿಕೇಟ್ ಕೋರ್ಸ್ ಪಡೆದುಕೊಳ್ಳಲು ವಿದ್ಯಾರ್ಥಿಗಳು ಪಡೆದ ಅಗತ್ಯವಾದ ಅಂಕಗಳನ್ನು ಅರ್ಹತೆಗೆ ಪರಿಗಣಿಸಬಹುದು ಎಂದು ಹೇಳಲಾಗಿದೆ.
ಎನ್‌ಇಪಿ 2020ಕ್ಕೆ ಪೂರಕವಾಗಿ ಉನ್ನತ ಶಿಕ್ಷಣದಲ್ಲಿ ಮಲ್ಟಿಪಲ್ ಎಂಟ್ರಿ ಮತ್ತು ಎಕ್ಸಿಟ್ ಗೆ ಅವಕಾಶ ಒದಗಿಸಲು ಯುಜಿಸಿಯ ಸಮಿತಿ ಶಿಫಾರಸು ಮಾಡಿದ್ದು, ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಪದವಿ ನಿಯಮಗಳನ್ನು ನವೀಕರಿಸುವಂತೆ ಸಲಹೆ ನೀಡಲಾಗಿದೆ.
ಅಂತೆಯೇ ಕೋರ್ಸ್ ಅವಧಿ ಎಷ್ಟೇ ಇದ್ದರೂ ಕೂಡ ವಿದ್ಯಾರ್ಥಿಗಳು ಅಗತ್ಯವಾದ ಕ್ರೆಡಿಟ್ ಗಳಿಸಿದಾಗ ಅವರನ್ನು ಪದವಿ, ಡಿಪ್ಲೋಮಾ ಅಥವಾ ಸರ್ಟಿಫಿಕೇಟ್ ಪಡೆಯಲು ಅರ್ಹತೆಗೆ ಪರಿಶೀಲಿಸಬಹುದು. ಪದವಿ ಕೋರ್ಸ್ ಗಳ ಕನಿಷ್ಠ ಅವಧಿಯ ಹೊರತಾಗಿಯೂ ಕ್ರೆಡಿಟ್ ಗಳ ಆಧಾರದಲ್ಲಿ ಪದವಿಗೆ ಪರಿಗಣಿಸಬಹುದು ಎಂದು ಹೇಳಲಾಗಿದೆ.