ಒಪ್ಪೊ ಸ್ಮಾರ್ಟ್‌ಫೋನ್‌ಗಳು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಈಗ ಕಂಪನಿ ಹೊಸ ಕ್ಷೇತ್ರಕ್ಕೆ ಲಗ್ಗೆಯಿಡುವ ತಯಾರಿ ನಡೆಸಿದೆ. ಭಾರತದಲ್ಲಿ ಇತ್ತೀಚಿಗೆ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಹಾಗೂ ಪರಿಸರ ಸ್ನೇಹಿ ಹೆಸರಿನಲ್ಲಿ ಜನರು ಎಲೆಕ್ಟ್ರಿಕ್ ವಾಹನಗಳ ಖರೀದಿ ಮಾಡ್ತಿದ್ದಾರೆ. ಭಾರತದ ಅನೇಕ ಕಂಪನಿಗಳು ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುತ್ತಿವೆ. ಒಪ್ಪೊ ಈಗ ಈ ಕ್ಷೇತ್ರಕ್ಕೆ ಕಾಲಿಡುವ ತಯಾರಿ ನಡೆಸಿದೆ. ಭಾರತದಲ್ಲಿ ಒಪ್ಪೊಇವಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುವ ಯೋಜನೆ ರೂಪಿಸಿದೆ. 2023 ಮತ್ತು 2024 ರಲ್ಲಿ ಒಪ್ಪೊದ ಎಲೆಕ್ಟ್ರಿಕಲ್ ಸ್ಕೂಟರ್ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ.
ವರದಿಯ ಪ್ರಕಾರ, ಎಲೆಕ್ಟ್ರಿಕ್ ಸ್ಕೂಟರ್ ಯೋಜನೆ ಇನ್ನೂ ಆರಂಭಿಕ ಹಂತದಲ್ಲಿದೆ. ಹಾಗಾಗಿ ಸ್ಕೂಟರ್ ಬಿಡುಗಡೆ ದಿನಾಂಕ ನಿಶ್ಚಯವಾಗಿಲ್ಲ. ಆದ್ರೆ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಬಹಿರಂಗವಾಗಿದೆ. ಒಪ್ಪೊ ಈ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆಯನ್ನು 60 ಸಾವಿರ ರೂಪಾಯಿಗೆ ಮಾರುಕಟ್ಟೆಗೆ ತರುವ ಸಿದ್ಧತೆ ನಡೆಸಿದೆ.
ಕಂಪನಿಯು ಬ್ಯಾಟರಿ ಮತ್ತು ಇತರ ಘಟಕಗಳಿಗಾಗಿ ತಯಾರಕರೊಂದಿಗೆ ಮಾತುಕತೆ ಶುರು ಮಾಡಿದೆ. ಸ್ಕೂಟರ್ ಮಾತ್ರವಲ್ಲದೆ, ಕಂಪನಿಯು ಟಾಟಾ ನ್ಯಾನೊದಂತಹ ಕಾಂಪ್ಯಾಕ್ಟ್ ಕಾರಿನ ಮೇಲೂ ಕೆಲಸ ಮಾಡುತ್ತಿದೆ. ಇಂಟ್ರಾಸಿಟಿ ಪ್ರಯಾಣಕ್ಕಾಗಿ ಎಲೆಕ್ಟ್ರಿಕ್ ಕಾರುಗಳು ಮತ್ತು ಸ್ಕೂಟರ್‌ಗಳನ್ನು ವಿನ್ಯಾಸಗೊಳಿಸಲು ಒಪ್ಪೊ ಮುಂದಾಗಿದೆ.