ಮಧ್ಯಪ್ರದೇಶದ ಬಿಜೆಪಿ ಶಾಸಕರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಶಾಸಕರು, ಪಿಎಂ ಕಾಲೇಜ್ ಆಫ್ ಎಕ್ಸಲೆನ್ಸ್ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪಂಕ್ಚರ್ ಅಂಗಡಿ ತೆರೆಯುವ ಸಲಹೆ ನೀಡ್ತಿದ್ದಾರೆ. ಬಿಜೆಪಿ ಶಾಸಕ ಗುಣ ಪನ್ನಾಲಾಲ್ ಶಾಕ್ಯ, ಈ ಮಾತನ್ನು ವಿದ್ಯಾರ್ಥಿಗಳಿಗೆ ಹೇಳಿದ್ದು ಈಗ ಅದು ಚರ್ಚೆಯ ವಿಷ್ಯವಾಗಿದೆ.
ಪದವಿಯಿಂದ ಪ್ರಯೋಜನವಿಲ್ಲ. ಜೀವನೋಪಾಯಕ್ಕಾಗಿ ಮೋಟಾರ್ ಸೈಕಲ್ ಪಂಕ್ಚರ್ ಅಂಗಡಿ ತೆರೆಯಬೇಕು ಏಂದು ಗುಣ ಪನ್ನಾಲಾಲ್ ಶಾಕ್ಯ ಹೇಳಿದ್ದಾರೆ. ಈ ಕಾಲೇಜು, ಈ ಶಿಕ್ಷಣ ಸಂಸ್ಥೆ ಕಂಪ್ರೆಸರ್ ಹೌಸ್ ಅಲ್ಲ ಎಂದು ಬಿಜೆಪಿ ಶಾಸಕರು ಹೇಳಿದ್ದಾರೆ.
ಬಿಜೆಪಿ ಶಾಸಕರ ಹೇಳಿಕೆಗೆ ವಿವಿಧ ವಲಯಗಳಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಯುವಕರಿಗೆ ‘ಪಕೋಡಾ’ ಮಾರಲು ಸಲಹೆ ನೀಡುತ್ತಿದ್ದರೆ, ಅವರ ಶಾಸಕರು ಕಾಲೇಜು ಪದವಿಗಳನ್ನು ‘ನಿಷ್ಪ್ರಯೋಜಕ’ ಎಂದು ತಿರಸ್ಕರಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಕಿಡಿಕಾರಿವೆ.