ನವದೆಹಲಿ: ಏಪ್ರಿಲ್ ವೇಳೆಗೆ ಮೆಡಿಕಲ್ ಸ್ಟೋರ್ ನಲ್ಲಿಯೂ ಕೊರೊನಾ ಲಸಿಕೆ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.
ಮುಂದಿನ ವರ್ಷ ಏಪ್ರಿಲ್ ವೇಳೆಗೆ ಭಾರತದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಕೊರೋನಾ ಲಸಿಕೆ ಜನರಿಗೆ ಸಿಗುವ ಸಾಧ್ಯತೆ ಇದೆ. ಆರಂಭಿಕ ಹಂತದಲ್ಲಿ ಸರ್ಕಾರವೇ ಲಸಿಕೆ ವಿತರಿಸಲಿದ್ದು, ಹೆಚ್ಚುವರಿ ಲಸಿಕೆ ಲಭ್ಯವಾದ ನಂತರ ಮೆಡಿಕಲ್ ಸ್ಟೋರ್ ಗಳಲ್ಲಿಯೂ ಮಾರಾಟಕ್ಕೆ ಪೂರೈಕೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
5 ಲಸಿಕೆಗಳು ಅಂತಿಮಹಂತದ ಪ್ರಯೋಗದಲ್ಲಿದ್ದು, ಅನುಮತಿಗೆ ಕಾಯುತ್ತಿವೆ. ಜನವರಿಯಿಂದ ಯಾವುದಾದರೂ ಒಂದು ಲಸಿಕೆಗೆ ಅನುಮತಿ ನೀಡಿ ಸರ್ಕಾರದಿಂದಲೇ ಕೊರೋನಾ ವಾರಿಯರ್ಸ್ ಗಳಿಗೆ ನೀಡಲಾಗುತ್ತದೆ. ಆದ್ಯತಾ ವರ್ಗಕ್ಕೆ ನೀಡಿದ ನಂತರ ಎಲ್ಲರಿಗೂ ಲಸಿಕೆ ನೀಡಲಿದ್ದು, ಬಳಿಕ ಮುಕ್ತ ಮಾರುಕಟ್ಟೆಯಲ್ಲಿಯೂ ಲಸಿಕೆ ಸಿಗುವಂತೆ ಮಾಡಲಾಗುವುದು. ಸರ್ಕಾರದಿಂದಲೇ ಬೆಲೆ ನಿಗದಿ ಮಾಡಲಾಗುವುದು ಎನ್ನಲಾಗಿದೆ.