
ತಮ್ಮ ಜಾದೂ ಪ್ರದರ್ಶನಗಳಿಂದಲೇ ದೇಶದಲ್ಲಿ ಖ್ಯಾತಿ ಗಳಿಸಿದ್ದ ಓ.ಪಿ. ಶರ್ಮಾ, ಪುತ್ರರಾದ ಪ್ರೇಮ್ ಪ್ರಕಾಶ್ ಶರ್ಮಾ, ಸತ್ಯ ಪ್ರಕಾಶ್ ಶರ್ಮಾ ಮತ್ತು ಪಂಕಜ್ ಪ್ರಕಾಶ್ ಶರ್ಮಾ ಹಾಗೂ ಪುತ್ರಿ ರೇಣು, ಪತ್ನಿ ಮೀನಾಕ್ಷಿ ಶರ್ಮಾ ಅವರನ್ನು ಅಗಲಿದ್ದಾರೆ.
ಉತ್ತರ ಪ್ರದೇಶದ ಕಾನ್ಪುರದಲ್ಲಿ ಅವರು ವಾಸಿಸುತ್ತಿದ್ದ ಬಂಗಲೆಯನ್ನು ಭೂತ ಬಂಗಲೆ ಎಂದೇ ಕರೆಯಲಾಗುತ್ತಿತ್ತು. ಓ.ಪಿ. ಶರ್ಮಾ ಮೂವತ್ನಾಲ್ಕು ಸಾವಿರಕ್ಕೂ ಅಧಿಕ ಪ್ರದರ್ಶನಗಳನ್ನು ಈವರೆಗೂ ನೀಡಿದ್ದಾರೆ ಎಂದು ಹೇಳಲಾಗಿದೆ.
ಅವರ ತಂಡದಲ್ಲಿ ನೂರಕ್ಕೂ ಅಧಿಕ ಕಲಾವಿದರು ಇರುತ್ತಿದ್ದು, ಈ ಪೈಕಿ ಹಾಡುಗಾರರು, ಸಂಗೀತಗಾರರು ಸಹ ಇದ್ದರು. ಅವರು ಯಾವುದೇ ಒಂದು ಊರಿಗೆ ಪ್ರದರ್ಶನ ನೀಡಲು ಹೋಗುವ ಸಂದರ್ಭದಲ್ಲಿ 16 ಟ್ರಕ್ ಗಳಲ್ಲಿ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ಹೇಳಲಾಗಿದೆ.