
ಇದರಿಂದಾಗಿ ಅವರ ಟ್ವೀಟ್ ಟ್ರೋಲ್ ಆಗ್ತಿದೆ. ಅವರು ಟ್ವಿಟರ್‌ನಲ್ಲಿ ಭಾರೀ ಟ್ರೋಲ್‌ಗೆ ಒಳಗಾಗಿದ್ದು ಅವರ ಪೋಸ್ಟ್ ನ ಸ್ಕ್ರೀನ್‌ಶಾಟ್‌ಗಳನ್ನು ಈಗ ಹಲವಾರು ವೆಬ್‌ಸೈಟ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಹಿಂದೂ ಸಂಪ್ರದಾಯಗಳ ಪ್ರಕಾರ ದೀಪಾವಳಿ ಹಬ್ಬದ ಸಮಯದಲ್ಲಿ ಮನೆಯನ್ನು ಅಲಂಕರಿಸಲು ದೀಪವನ್ನು ಬಳಸಲಾಗುತ್ತದೆ ಮತ್ತು ದೀಪಗಳ ಹಬ್ಬವಾದ ದೀಪಾವಳಿಗೆ ಶುಭ ಹಾರೈಸಲು ದೀಪದ ಎಮೋಜಿಯನ್ನು ಬಳಸಲಾಗುತ್ತದೆ.
ಆದರೆ ಹೋಳಿ ಹಬ್ಬಕ್ಕೆ ನವಾಜ್ ಷರೀಫ್ ದೀಪದ ಎಮೋಜಿ ಬಳಸಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಅವರಿಗೆ ದೀಪಾವಳಿ ಮತ್ತು ಹೋಳಿ ಹಬ್ಬಗಳ ನಡುವಿನ ವ್ಯತ್ಯಾಸದ ಬಗ್ಗೆ ಹೇಳ್ತಿದ್ದಾರೆ.