ಪ್ರೇಮಿಗಳ ವಾರ ನಡೆಯುತ್ತಿದೆ. ವ್ಯಾಲಂಟೈನ್ ಡೇಗೆ ಇನ್ನು ಕೆಲವೇ ದಿನಗಳ ಬಾಕಿಯಿದೆ. ಹಬ್ಬದಂತೆ ಆ ದಿನವನ್ನು ಸಂಭ್ರಮಿಸುವ ಪ್ರೇಮಿಗಳಿಗೆ ಆ ದಿನವನ್ನು ಆನಂದಿಸಲು ಸಮಯದ ಜೊತೆ ಶಕ್ತಿ ಕೂಡ ಅಗತ್ಯವಿದೆ. ಸಂಪೂರ್ಣ ದಿನ ಸಂಗಾತಿ ಜೊತೆ ಎಂಜಾಯ್ ಮಾಡಲು ದೇಹ ಸದೃಢವಾಗಿರಬೇಕು. ರೋಮ್ಯಾಂಟಿಕ್ ಕ್ಷಣಗಳನ್ನು ಕಳೆಯಲು ನೀವೂ ಪ್ಲಾನ್ ಮಾಡಿದ್ದರೆ ಕೆಲವೊಂದು ಆಹಾರವನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿ. ಈ ಮೂಲಕ ದೇಹಕ್ಕೆ ಶಕ್ತಿ ತುಂಬಿಕೊಳ್ಳಿ.
ನಿಮ್ಮ ಆಹಾರದಲ್ಲಿ ಬೀಟ್ರೂಟ್ ಸೇರಿಸಿ. ಬೀಟ್ರೂಟ್ ರಸವು ಹೆಚ್ಚಿನ ಮಟ್ಟದ ಬೋರಾನ್ ಖನಿಜವನ್ನು ಹೊಂದಿರುತ್ತದೆ. ಮಹಿಳೆಯರಲ್ಲಿ ಈಸ್ಟ್ರೊಜೆನ್ ಚಯಾಪಚಯಗೊಳಿಸಲು ಇದು ಸಹಾಯ ಮಾಡುತ್ತದೆ. ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರ ಸೇವನೆಯಿಂದ ದೇಹವು ವಿಶ್ರಾಂತಿ ಪಡೆಯುತ್ತದೆ ಮತ್ತು ಶಾರೀರಿಕ ಸಂಬಂಧ ಬೆಳೆಸಲು ರಕ್ತದ ಹರಿವಿಗೆ ನೆರವಾಗುತ್ತದೆ.
ಅಣಬೆ ಸೇವನೆ ಕೂಡ ಒಳ್ಳೆಯದು. ಇದರಲ್ಲಿ ಹೆಚ್ಚಿನ ಮಟ್ಟದ ಉತ್ಕರ್ಷಣ ನಿರೋಧಕಗಳಾದ ಎರ್ಗೋಥಿಯೋನಿನ್ ಮತ್ತು ಗ್ಲುಟಾಥಿಯೋನ್ ಇದೆ. ಇದು ಪ್ರೀತಿಯ ಮನಸ್ಥಿತಿ ಹೆಚ್ಚಿಸುತ್ತದೆ. ಅಣಬೆಗಳಲ್ಲಿ ವಿಟಮಿನ್ ಬಿ2, ಬಿ9 ಇದೆ. ಇದು ಆಹಾರದಲ್ಲಿರುವ ಶಕ್ತಿ ದೇಹ ಸೇರಲು ನೆರವಾಗುತ್ತದೆ.
ಗ್ರೀನ್ ಟೀಯಲ್ಲಿ ಆಂಟಿಆಕ್ಸಿಡೆಂಟ್ ಕ್ಯಾಟೆಚಿನ್ ಇದೆ. ಇದು ರಕ್ತನಾಳಗಳು ನೈಟ್ರಿಕ್ ಆಕ್ಸೈಡ್ ಬಿಡುಗಡೆ ಮಾಡಲು ಕಾರಣವಾಗುತ್ತದೆ. ಇದು ರಕ್ತನಾಳಗಳ ಗಾತ್ರವನ್ನು ಹೆಚ್ಚಿಸುತ್ತದೆ ಮತ್ತು ಲೈಂಗಿಕ ಅಂಗಗಳಿಗೆ ರಕ್ತದ ಹರಿವನ್ನು ಸುಧಾರಿಸುತ್ತದೆ. ಪ್ರತಿದಿನ 2-3 ಕಪ್ ಗ್ರೀನ್ ಟೀ ಕುಡಿಯುವ ಮೂಲಕ ನಿಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
ಪಿಸ್ತಾದಲ್ಲಿ ಪ್ರೋಟೀನ್, ಫೈಬರ್ ಮತ್ತು ಕೊಬ್ಬು ಸಮೃದ್ಧವಾಗಿದೆ. ಪುರುಷರ ಖಾಸಗಿ ಭಾಗದಲ್ಲಿ ರಕ್ತದ ಹರಿವು ಹೆಚ್ಚಾಗಲು ಇದು ಸಹಾಯಕಾರಿ. ಇದರಿಂದಾಗಿ ನಿಮಿರುವಿಕೆಯ ಸಮಸ್ಯೆ ದೂರವಾಗುತ್ತದೆ. ಸುಮಾರು 3 ವಾರಗಳ ಕಾಲ ಪ್ರತಿದಿನ 100 ಪಿಸ್ತಾ ಸೇವಿಸುವ ಮೂಲಕ ನಿಮ್ಮ ಶಕ್ತಿಯನ್ನು ಹೆಚ್ಚಿಸಬಹುದು.
ದಾಳಿಂಬೆ ರಸ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಖಾಸಗಿ ಭಾಗಕ್ಕೆ ರಕ್ತದ ಹರಿವನ್ನು ಸುಧಾರಿಸುತ್ತದೆ.