‘ಸಂಪುಟದ ಪೂರ್ವಾನುಮತಿ ಪಡೆಯದೇ ಕೃಷಿ ಕಾನೂನು ರದ್ದುಗೊಳಿಸಿದ್ದಾರೆ’ – ಮೋದಿ ವಿರುದ್ಧ ಪಿ.ಚಿದಂಬರಂ ಕಿಡಿ 20-11-2021 10:29AM IST / No Comments / Posted In: Latest News, India, Live News ಗುರುನಾನಕ್ ಜಯಂತಿಯಂದು ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಕೃಷಿ ಮಸೂದೆ ಹಿಂಪಡೆದ ವಿಚಾರವಾಗಿ ಪಿ.ಚಿದಂಬರಂ ಕೇಂದ್ರ ಸರ್ಕಾರವನ್ನು ಕುಟುಕಿದ್ದಾರೆ. ಸಚಿವ ಸಂಪುಟದ ಪೂರ್ವಾನುಮತಿ ಇಲ್ಲದೆಯೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವುದು ಬಿಜೆಪಿ ಮಾತ್ರ ಎಂದು ಚಿದಂಬರಂ ಟೀಕಿಸಿದ್ದಾರೆ. ಕೃಷಿ ಮಸೂದೆ ಹಿಂಪಡೆದ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಸಂಪುಟದ ಒಪ್ಪಿಗೆ ಪಡೆಯದೇ ಪ್ರಧಾನಿ ಮೋದಿ ಇಂತದ್ದೊಂದು ಮಹತ್ವದ ಘೋಷಣೆ ಮಾಡಿದ್ದು ತಪ್ಪು ಎಂದಿದ್ದಾರೆ. ಸಂಪುಟ ಸಭೆಯನ್ನೇ ನಡೆಸದೆ ಇಂತದ್ದೊಂದು ಮಹತ್ವದ ಘೋಷಣೆಯನ್ನು ಪ್ರಧಾನಿ ಮಾಡಿದ್ದಾರೆ ಎಂಬುದನ್ನು ಗಮನಿಸಿದ್ದೀರೇ..? ಬಿಜೆಪಿ ಅಧಿಕಾರದ ಅವಧಿಯಲ್ಲಿ ಮಾತ್ರ ಸಂಪುಟದ ಪೂರ್ವಾನುಮತಿ ಪಡೆಯದೇ ಕಾನೂನು ರಚನೆಯಾಗುತ್ತದೆ ಹಾಗೂ ರದ್ದಾಗುತ್ತೆ ಎಂದು ಟ್ವೀಟಾಯಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ವಿರುದ್ಧವೂ ಇದೇ ವೇಳೆ ಆಕ್ರೋಶ ಹೊರಹಾಕಿದ ಚಿದಂಬರಂ, ಪ್ರಧಾನಿ ಮೋದಿಯ ಈ ಘೋಷಣೆಯನ್ನು ಅಮಿತ್ ಶಾ ಅದ್ಭುತ ರಾಜನೀತಿವಂತಿಕೆ ಎಂದು ಹೊಗಳಿದ್ದಾರೆ. ಜೆ.ಪಿ. ನಡ್ಡಾ ಪ್ರಧಾನಿಗೆ ರೈತರ ಬಗ್ಗೆ ಕಾಳಜಿ ಇದೆ ಎಂದು ವ್ಯಾಖ್ಯಾನಿಸಿದ್ದಾರೆ ಇತ್ತ ರಾಜನಾಥ್ ಸಿಂಗ್ ರೈತರ ಕಲ್ಯಾಣಕ್ಕಾಗಿ ಪ್ರಧಾನಿ ಈ ನಿರ್ಧಾರ ಕೈಗೊಂಡರು ಎಂದು ಹೇಳ್ತಿದ್ದಾರೆ. ಹಾಗಾದರೆ ಇಷ್ಟೊಳ್ಳೆ ಸಲಹೆ ಕೊಡುವ ಈ ನಾಯಕರು ಕಳೆದ 15 ತಿಂಗಳ ಹಿಂದೆ ಎಲ್ಲಿ ಹೋಗಿದ್ದರು ಎಂದು ಪ್ರಶ್ನೆ ಮಾಡಿದ್ದಾರೆ. Home Minister hailed the PM’s announcement as showing ‘remarkable statesmanship’ BJP President said that PM has ‘immense care for farmers’ Defence Minister said that PM had taken the decision considering the ‘welfare of the farmers’ — P. Chidambaram (@PChidambaram_IN) November 20, 2021