ಬೆಂಗಳೂರು : ರಾಜ್ಯದಲ್ಲಿ ಶ್ರೀಮಂತರ ‘BPL ಕಾರ್ಡ್’ಗಳು ಮಾತ್ರ ರದ್ದಾಗುತ್ತದೆ, ಬಡವರ ಕಾರ್ಡ್ ರದ್ದಾಗಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ BPL ಕಾರ್ಡ್ಗಳು ರದ್ದಾಗುತ್ತವೆ ಎನ್ನುವ ಆತಂಕ ಯಾರಿಗೂ ಬೇಡ. ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ಮರು ಪರಿಶೀಲನೆ ಮಾಡುತ್ತಿದ್ದೇವೆ. ನೀವು ಅರ್ಹರೇ ಆಗಿದ್ದರೆ ಖಂಡಿತವಾಗಿಯೂ ನಿಮಗೆ BPL ಸೌಲಭ್ಯಗಳು ಸಿಗಲಿವೆ. ಒಂದು ವೇಳೆ ಅರ್ಹರಾಗಿದ್ದರೂ ರದ್ದಾಗಿದ್ದರೆ ಮತ್ತೆ ಅರ್ಜಿ ಸಲ್ಲಿಸಿ ಪಡೆಯಬಹುದು. ಸರ್ಕಾರಿ ನೌಕರರು, ಹತ್ತಾರು ಎಕರೆ ಜಮೀನು ಹೊಂದಿರುವವರು, ಸಹಕಾರ ಸಂಘಗಳ ಖಾಯಂ ಸರ್ಕಾರಿ ನೌಕರರು ಬಿಪಿಎಲ್ ಸೌಲಭ್ಯ ಪಡೆದಿರುವುದು ತಿಳಿದುಬಂದಿದೆ.
ಈ ಸಂಬಂಧ ನಾವು ಶಾಸಕರಿಗೆ ಮಾಹಿತಿ ನೀಡುತ್ತಿದ್ದೇವೆ. ನಮ್ಮ ಗ್ಯಾರಂಟಿ ಸಮಿತಿ ಅವರಿಗೂ ಕೂಡ ನೀಡಿದ್ದೇವೆ. ಯಾರಿಗೆ ಅನ್ಯಾಯವಾಗಿದೆ ಅವರ ಮನೆ ಬಾಗಿಲಿಗೆ ಹೋಗಿ ಆಗಿರುವ ತೊಂದರೆಯನ್ನು ಅವರು ಸರಿಪಡಿಸುತ್ತಾರೆ. ನಮ್ಮ ಸರ್ಕಾರ ಇರುವುದೇ ಬಡವರಿಗಾಗಿ. ಖಂಡಿತವಾಗಿಯೂ ಅರ್ಹರಿಗೆ ಸೌಲಭ್ಯ ಕೊಟ್ಟೇಕೊಡುತ್ತೇವೆ ಎಂದರು.
BPL ಕಾರ್ಡ್ಗಳು ರದ್ದಾಗುತ್ತವೆ ಎನ್ನುವ ಆತಂಕ ಯಾರಿಗೂ ಬೇಡ. ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ಮರು ಪರಿಶೀಲನೆ ಮಾಡುತ್ತಿದ್ದೇವೆ. ನೀವು ಅರ್ಹರೇ ಆಗಿದ್ದರೆ ಖಂಡಿತವಾಗಿಯೂ ನಿಮಗೆ BPL ಸೌಲಭ್ಯಗಳು ಸಿಗಲಿವೆ. ಒಂದು ವೇಳೆ ಅರ್ಹರಾಗಿದ್ದರೂ ರದ್ದಾಗಿದ್ದರೆ ಮತ್ತೆ ಅರ್ಜಿ ಸಲ್ಲಿಸಿ ಪಡೆಯಬಹುದು. ಸರ್ಕಾರಿ ನೌಕರರು, ಹತ್ತಾರು ಎಕರೆ ಜಮೀನು…
— DK Shivakumar (@DKShivakumar) November 20, 2024