alex Certify ವಿಮಾನ ಪ್ರಯಾಣಿಕರು ಓದಲೇಬೇಕು ಈ ಸುದ್ದಿ; ಒಂದು ಬ್ಯಾಗ್ ನಿಯಮವನ್ನು ಜಾರಿಗೆ ತಂದ CISF….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನ ಪ್ರಯಾಣಿಕರು ಓದಲೇಬೇಕು ಈ ಸುದ್ದಿ; ಒಂದು ಬ್ಯಾಗ್ ನಿಯಮವನ್ನು ಜಾರಿಗೆ ತಂದ CISF….!

ವಿಮಾನ ಪ್ರಯಾಣಿಕರು, ಫ್ಲೈಟ್ ಕ್ಯಾಬಿನ್ ಒಳಗೆ ಒಂದೇ ಒಂದು ಬ್ಯಾಗ್ ಕೊಂಡಯ್ಯಲು ಮಾತ್ರ ಅವಕಾಶವಿದೆ ಎಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ತಿಳಿಸಿದೆ. ಈ ಬಗ್ಗೆ ನಾಗರಿಕ ವಿಮಾನಯಾನ ಭದ್ರತಾ ಸಂಸ್ಥೆಗೆ ಆದೇಶ ನೀಡಿರುವ CISF ದೇಶೀಯ ವಿಮಾನಗಳ ಎಲ್ಲಾ ಪ್ರಯಾಣಿಕರಿಗೆ ನಿಯಮ ಅನ್ವಯವಾಗುತ್ತದೆ‌ ಎಂದು ಹೇಳಿದೆ. ವಿಮಾನ ಕ್ಯಾಬಿನ್‌ನಲ್ಲಿ ಹೆಚ್ಚುವರಿ ಲಗೇಜ್‌ಗಳಿಂದ ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರವಾಗಿ ಈ ನಿಯಮವನ್ನ ಜಾರಿಗೊಳಿಸಿದೆ.

ಅಷ್ಟೇ ಅಲ್ಲಾ, ಕೆಲ ಪ್ರಯಾಣಿಕರು 2-3 ಕೈಚೀಲಗಳಲ್ಲಿ ಸಾಮಾನು ಸರಂಜಾಮುಗಳನ್ನು ಹೊತ್ತೊಯ್ಯುವ ಕಾರಣದಿಂದ ವಿಮಾನ ನಿಲ್ದಾಣಗಳಲ್ಲಿನ ಪ್ರೀ-ಎಂಬಾರ್ಕೇಶನ್ ಭದ್ರತಾ ಚೆಕ್‌ಪೋಸ್ಟ್‌ ಗಳಲ್ಲಿ ದಟ್ಟಣೆ ಉಂಟಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಮಾಡಲಾಗಿದೆ. ಎಲ್ಲಾ ಪಾಲುದಾರರು ಮತ್ತು ವಿಮಾನಯಾನ ಸಂಸ್ಥೆಗಳು ಒಂದು ಬ್ಯಾಗ್ ನಿಯಮವನ್ನು ಜಾರಿಗೊಳಿಸಿ ಎಂದು ಸಿಐಎಸ್ಎಫ್ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ​​ಸೆಕ್ಯುರಿಟಿ (BCAS)ಗೆ ತಿಳಿಸಿದೆ. ನಿಯಮವು ಮಹಿಳೆಯ ಚೀಲಗಳು ಸೇರಿದಂತೆ ಕೆಲವು ವಿನಾಯಿತಿಗಳನ್ನು ಒದಗಿಸುತ್ತದೆ.

ಸ್ಕ್ರೀನಿಂಗ್ ಪಾಯಿಂಟ್‌ಗೆ ಒಂದಕ್ಕಿಂತ ಹೆಚ್ಚು ಬ್ಯಾಗ್‌ಗಳನ್ನು ಸಾಗಿಸುವುದರಿಂದ ಕ್ಲಿಯರೆನ್ಸ್ ಸಮಯ ವಿಳಂಬವಾಗುತ್ತದೆ. ಪ್ರಿ-ಎಂಬಾರ್ಕೇಶನ್ ಸೆಕ್ಯುರಿಟಿ ಚೆಕ್ (PESC) ಪಾಯಿಂಟ್‌ನಲ್ಲಿ ದಟ್ಟಣೆ ಹೆಚ್ಚಾಗುತ್ತಿದ್ದು, ಇದರಿಂದ ಪ್ರಯಾಣಿಕರಿಗೆ ಅನಾನುಕೂಲತೆ ಉಂಟಾಗುತ್ತದೆ ಎಂದು ಜನವರಿ 19 ರಂದು ಸಿಐಎಸ್ಎಫ್ BCAS ನ ಡೈರೆಕ್ಟರ್-ಜನರಲ್ ನಾಸಿರ್ ಕಮಲ್ ಅವರಿಗೆ ನೀಡಿದ ಸಂವಹನದಲ್ಲಿ ಉಲ್ಲೇಖಿಸಿದೆ. ಇದನ್ನು ಪರಿಗಣಿಸಿ ಸುತ್ತೋಲೆ ಹೊರಡಿಸಿರುವ BCAS ಮಹಿಳೆಯರ ಬ್ಯಾಗ್ ಸೇರಿದಂತೆ ಸುತ್ತೋಲೆಯಲ್ಲಿ ಈಗಾಗಲೇ ಪಟ್ಟಿ ಮಾಡಲಾದ ವಸ್ತುಗಳನ್ನು ಹೊರತುಪಡಿಸಿ ಒಂದಕ್ಕಿಂತ ಹೆಚ್ಚು ಕೈಚೀಲಗಳನ್ನು ಸಾಗಿಸಲು ಯಾವುದೇ ಪ್ರಯಾಣಿಕರಿಗೆ ಅನುಮತಿ ನೀಡಬಾರದು ಎಂದಿದೆ.

ದಟ್ಟಣೆ ಮತ್ತು ಇತರ ಭದ್ರತಾ ಕಾಳಜಿಗಾಗಿ ಈ ಒಂದು ಕೈಚೀಲದ ನಿಯಮವನ್ನು ಜಾರಿಗೊಳಿಸಲಾಗಿದೆ‌. ಈ ನಿಯಮನ್ನು ನಿಖರವಾಗಿ ಜಾರಿಗೆ ತರಲು ಎಲ್ಲಾ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣ ನಿರ್ವಾಹಕರು ಸೂಕ್ತ ಸೂಚನೆ ನೀಡಬಹುದು ಎಂದು ಸುತ್ತೋಲೆ ಹೇಳುತ್ತದೆ.

ಎಲ್ಲಾ ವಿಮಾನಯಾನ ಸಂಸ್ಥೆಗಳು ಈ ಜವಾಬ್ದಾರಿ ತೆಗೆದುಕೊಂಡು, ಪ್ರಯಾಣಿಕರಿಗೆ ಮಾರ್ಗದರ್ಶನ ನೀಡಲು ಮತ್ತು ಅವರ ಕೈಚೀಲದ ಸ್ಥಿತಿಯನ್ನು ಪರಿಶೀಲಿಸಲು ಸಿಬ್ಬಂದಿಯನ್ನು ನಿಯೋಜಿಸಬೇಕೆಂದು CISF ಹೇಳಿದೆ‌. ಅಲ್ಲದೆ, ಪ್ರಯಾಣಿಕರಲ್ಲಿ ಈ ಬಗ್ಗೆ ಜಾಗೃತಿ ಮೂಢಿಸಲು ಅವರ ಟಿಕೆಟ್‌ಗಳು, ಬೋರ್ಡಿಂಗ್ ಪಾಸ್‌ಗಳಲ್ಲಿ ಒಂದು ಕೈಚೀಲದ ನಿಯಮವನ್ನು ಸ್ಪಷ್ಟವಾಗಿ ಪ್ರದರ್ಶಿಸಬೇಕು. ನಿಲ್ದಾಣಗಳಲ್ಲಿ ಈ ನಿಯಮದ ಹೋರ್ಡಿಂಗ್‌ಗಳು, ಬ್ಯಾನರ್‌ಗಳು ಮತ್ತು ಸ್ಟ್ಯಾಂಡಿಗಳನ್ನು ಇರಿಸಿ ಎಂದು CISF ಸೂಚನೆ ನೀಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...