ಭೋಪಾಲ್: ಲಸಿಕೆ ಪಡೆದವರಿಗೆ ಮಾತ್ರ ಪಡಿತರ ನೀಡಲು ಮಧ್ಯಪ್ರದೇಶದಿಂದ ಸರ್ಕಾರದಿಂದ ಹೊಸ ಆದೇಶ ಹೊರಡಿಸಲಾಗಿದೆ. ಲಸಿಕೆ ಹಾಕಿಸಿಕೊಳ್ಳದ ಕುಟುಂಬಗಳಿಗೆ ಪಡಿತರ ಸಾಮಗ್ರಿಗಳನ್ನು ನೀಡದಿರಲು ಮಧ್ಯಪ್ರದೇಶ ಸರ್ಕಾರ ತೀರ್ಮಾನಿಸಿದೆ.
ರೇಷನ್ ಕಾರ್ಡ್ ದಾರರು 2 ಡೋಸ್ ಲಸಿಕೆ ಪಡೆಯುವುದು ಕಡ್ಡಾಯವಾಗಿದೆ. ಪಡಿತರ ಚೀಟಿದಾರರು 2 ಡೋಸ್ ಲಸಿಕೆ ಪಡೆದುಕೊಂಡಿದ್ದಾರೆಯೇ ಎಂಬುದನ್ನು ಪರಿಶೀಲಿಸಿ ಖಾತರಿಪಡಿಸುವುದು ನ್ಯಾಯಬೆಲೆ ಅಂಗಡಿ ಮಾಲೀಕರ ಜವಾಬ್ದಾರಿಯಾಗಿದೆ ಎಂದು ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.
ಪಡಿತರ ಚೀಟಿದಾರರು ಕೋವಿಡ್ ಲಸಿಕೆ ಪಡೆದುಕೊಳ್ಳದಿದ್ದರೆ ಆಹಾರ ಸಾಮಗ್ರಿಗಳನ್ನು ವಿತರಿಸಬಾರದು ಎಂದು ಹೇಳಲಾಗಿದೆ.
ಮಧ್ಯಪ್ರದೇಶದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಆದೇಶವನ್ನು ಹೊರಡಿಸಿದ್ದು, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಫಲಾನುಭವಿಗಳು ಕೋವಿಡ್ -19 ಲಸಿಕೆ ಪುರಾವೆ ಇಲ್ಲದೆ ಸಬ್ಸಿಡಿ ಪಡಿತರವನ್ನು ಪಡೆಯುವಂತಿಲ್ಲ. ನವೆಂಬರ್ 8 ರಂದು ಎಲ್ಲಾ ಜಿಲ್ಲಾ ನಾಗರಿಕ ಸರಬರಾಜು ಅಧಿಕಾರಿಗಳಿಗೆ ಬಿಡುಗಡೆ ಮಾಡಲಾದ ಆದೇಶವನ್ನು ಮಂಗಳವಾರ ಸಾರ್ವಜನಿಕಗೊಳಿಸಲಾಗಿದೆ.
ಆದೇಶದ ಪ್ರಕಾರ, ಕೋವಿಡ್ -19 ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆಯಲು ವಿಫಲವಾದರೆ ಫಲಾನುಭವಿಗಳು ಡಿಸೆಂಬರ್ 31 ರ ನಂತರ ಪಡಿತರವನ್ನು ಪಡೆಯುವುದಿಲ್ಲ. ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಂಗಡಿಯವರು ಡಿಸೆಂಬರ್ 31 ರೊಳಗೆ 11.5 ಮಿಲಿಯನ್ ಕುಟುಂಬಗಳ ಎಲ್ಲಾ ಅರ್ಹ ಸದಸ್ಯರಿಗೆ ಲಸಿಕೆ ಹಾಕುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪಡಿತರ ಅಂಗಡಿಯ ಮಾಲೀಕರು ಲಸಿಕೆ ಹಾಕದ ಮತ್ತು ಮೊದಲ ಡೋಸ್ ತೆಗೆದುಕೊಂಡ ಫಲಾನುಭವಿಗಳ ಪಟ್ಟಿಯನ್ನು ಪ್ರತಿ ವಾರ ಹತ್ತಿರದ ಆಸ್ಪತ್ರೆಗೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.