ಚೆನ್ನೈ: ಚೆನ್ನೈ ಉಪನಗರ ರೈಲು ಸೇವೆ ಪ್ರಯಾಣಿಕರಿಗೆ ಎರಡು ಕಡ್ಡಾಯಗೊಳಿಸಲಾಗಿದೆ. ಕೊರೋನಾ ರೂಪಾಂತರಿ ಒಮಿಕ್ರಾಣ್ ಆತಂಕದ ಹಿನ್ನೆಲೆಯಲ್ಲಿ ಎರಡು ಡೋಸ್ ಪಡೆದವರಿಗೆ ಮಾತ್ರ ರೈಲ್ವೆ ಟಿಕೆಟ್ ನೀಡಲಾಗುವುದು.
ಜನವರಿ 10 ರಿಂದ ಹೊಸ ನಿಯಮ ಜಾರಿಗೆ ಬರಲಿದ್ದು, ಜನವರಿ 31 ರವರೆಗೆ ಜಾರಿಯಲ್ಲಿರುತ್ತದೆ. ಎರಡು ಡೋಸ್ ಪಡೆದ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿ ಹೊಂದಿದವರು ಮಾತ್ರ ಪ್ರಯಾಣಿಸಲು ಅನುಮತಿ ಇರುತ್ತದೆ. ರೈಲ್ವೇ ನಿಲ್ದಾಣ ಆವರಣದಲ್ಲಿ ಮಾಸ್ಕ್ ಧರಿಸದವರಿಗೆ 500 ರೂಪಾಯಿ ದಂಡ ವಿಧಿಸಲಾಗುವುದು. ಕೋವಿಡ್ ಮಾರ್ಗಸೂಚಿಗಳನ್ನು ಪ್ರಯಾಣಿಕರು ಕಡ್ಡಾಯವಾಗಿ ಪಾಲಿಸಬೇಕು ಎಂದು ರೈಲ್ವೇಯಿಂದ ಮಾಹಿತಿ ನೀಡಲಾಗಿದೆ.