ಕಾಳು ಮೆಣಸಿನ ಬಗ್ಗೆ ಗೊತ್ತಿಲ್ಲ ಅನ್ನೋ ಭಾರತೀಯರು ಯಾರಿದ್ದಾರೆ ಹೇಳಿ..? ಆದರೆ ಈ ಪುಟ್ಟ ಕಾಳು ಮೆಣಸು ಎಷ್ಟೊಂದು ಪೋಷಕಾಂಶಗಳನ್ನ ಅಡಿಗಿಸಿಕೊಂಡಿದೆ ಎಂದು ಕೇಳಿದ್ರೆ ನಿಮಗೆ ಆಶ್ಚರ್ಯ ಎನಿಸಬಹುದು. ಹೌದು..! ಕಾಳು ಮೆಣಸಿನಲ್ಲಿ ಕಬ್ಬಿಣಾಂಶ, ಪೊಟ್ಯಾಷಿಯಂ, ಮೆಗ್ನೀಷಿಯಂ, ಜಿಂಕ್, ಕ್ರೋಮಿಯಂ, ವಿಟಾಮಿನ್ ಸಿ, ಎ ಹಾಗೂ ಡಿ ಸೇರಿದಂತೆ ಇನ್ನೂ ಹಲವಾರು ಜೀವಸತ್ವಗಳು ಇದರಲ್ಲಿದೆ. ಅಲ್ಲದೇ ಈ ಕಾಳು ಮೆಣಸಿನ ಸೇವನೆಯಿಂದ 70 ಕಾಯಿಲೆಗಳನ್ನ ದೂರವಿಡಬಹುದಾಗಿದೆ.
ಭಯಾನಕ ಕಾಯಿಲೆಗಳಿಂದ ಕಾಳು ಮೆಣಸು ನಮ್ಮನ್ನ ದೂರವಿರುಸುತ್ತೆ. ಇದರಲ್ಲಿರುವ ಪೋಷಕಾಂಶ ಹಾಗೂ ಜೀವಸತ್ವಗಳು ತೂಕ ಇಳಿಕೆ, ಡೈರಿಯಾ, ಮಲಬದ್ಧತೆ ಸೇರಿದಂತೆ ಇನ್ನೂ ಹಲವು ಕಾಯಿಲೆಗಳನ್ನ ನಮ್ಮ ಹತ್ತಿರವೂ ಸುಳಿಯದಂತೆ ಮಾಡುತ್ತೆ.
ಕಾಳು ಮೆಣಸು ದೇಹದಲ್ಲಿರುವ ಬೊಜ್ಜನ್ನ ಕರಗಿಸೋದ್ರ ಜೊತೆ ಜೊತೆಗೆ ಎಸಿಡಿಟಿ, ಕಫ, ಶೀತ, ಚರ್ಮದ ಕಾಯಿಲೆ, ಹೊಟ್ಟೆ ನೋವಿಗೂ ರಾಮಬಾಣವಾಗಿದೆ. ಇದು ಮಾತ್ರವಲ್ಲದೇ ಕಣ್ಣಿನ ಆರೋಗ್ಯಕ್ಕೂ ಕಾಳು ಮೆಣಸು ಒಳ್ಳೆಯದು. ಜೇನುತುಪ್ಪದೊಂದಿಗೆ ಪ್ರತಿನಿತ್ಯ 2-3 ಕಾಳು ಮೆಣಸಿನ ಪುಡಿಯನ್ನ ಸೇವಿಸೋದ್ರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಈ ಅಭ್ಯಾಸವನ್ನ ರೂಢಿಸಿಕೊಂಡ ಕೇವಲ 7 ದಿನಗಳಲ್ಲೇ ಫಲಿತಾಂಶ ನಿಮಗೇ ತಿಳಿಯುತ್ತಾ ಹೋಗುತ್ತೆ .