ವಿಜಯಪುರ: ಹೊಸ ವಿದ್ಯುತ್ ಸಂಪರ್ಕಗಳಿಗೆ ಗೃಹಜೋತಿ ಯೋಜನೆಯಡಡಿ 58 ಯುನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಒಂದು ವರ್ಷದ ನಂತರ ಹೊಸ ಸರಾಸರಿ ನಿಗದಿ ಮಾಡಲು ಸಾಧ್ಯವಿಲ್ಲವೆಂದು ಇಂಧನ ಸಚಿವ ಕೆ.ಜೆ. ಚಾರ್ಜ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಕಟ್ಟಡಗಳಿಗೆ 58 ಯುನಿಟ್ ಉಚಿತ ವಿದ್ಯುತ್ ನೀಡುತ್ತಿದ್ದು, ಒಂದು ವರ್ಷದ ನಂತರ ಪರಿಷ್ಕರಿಸಲಾಗುವುದೇ ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
58 ಯುನಿಟ್ ಉಚಿತ ವಿದ್ಯುತ್ ನೀಡುವುದೇ ಜಾಸ್ತಿಯಾಗಿದೆ. ಹೊಸ ಗ್ರಾಹಕರಿಗೆ ಸರಾಸರಿ ಇರುವುದೇ 50 ಯುನಿಟ್ ಆಗಿದ್ದು, ವರ್ಷದ ನಂತರ ಪರಿಷ್ಕರಣೆ ಸಾಧ್ಯವಿಲ್ಲ. ಒಂದೇ ವೇಳೆ ಪರಿಷ್ಕರಿಸಬೇಕಿದ್ದರೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 2.62 ಕೋಟಿ ಗೃಹಜ್ಯೋತಿ ಗ್ರಾಹಕರು ಈಗಾಗಲೇ ಸರಾಸರಿ 200 ಯುನಿಟ್ ವರೆಗೆ ಉಚಿತ ವಿದ್ಯುತ್ ಪಡೆಯುತ್ತಿದ್ದು, ಅದರಲ್ಲಿಯೂ ಶೇ. 10 ರಷ್ಟು ಹೆಚ್ಚುವರಿ ವಿದ್ಯುತ್ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.