ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ದರ್ಶನಕ್ಕೆ ಆನ್ಲೈನ್ ನಲ್ಲಿ ಟಿಕೆಟ್ ಕಾಯ್ದಿರಿಸುವ ಭಕ್ತರನ್ನು ವಂಚಿಸಲು ನಕಲಿ ವೆಬ್ಸೈಟ್ ಗಳ ಹಾವಳಿ ಹೆಚ್ಚಾಗಿದ್ದು, ಭಕ್ತರಿಗೆ ನಷ್ಟ ಉಂಟು ಮಾಡುತ್ತಿವೆ.
ಟಿಟಿಡಿ ಆನ್ ಲೈನ್ ಟಿಕೆಟ್ ಕಾಯ್ದಿರಿಸುವಾಗ ಅಧಿಕೃತ ವಿಳಾಸವನ್ನು ಗಮನಿಸಬೇಕೆಂದು ತಿಳಿಸಿದೆ. ದೇವಾಲಯದ ಐಟಿ ವಿಭಾಗ ನಕಲಿ ವೆಬ್ಸೈಟ್ ಗಳನ್ನು ಗುರುತಿಸಿ ತಿರುಮಲ ಟೌನ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸೈಬರ್ ಸೆಲ್ ತನಿಖೆ ಕೈಗೊಂಡಿದೆ.ಇದುವರೆಗೆ 40 ನಕಲಿ ವೆಬ್ ಸೈಟ್ ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆನ್ಲೈನ್ ನಲ್ಲಿ ಟಿಕೆಟ್ ಕಾಯ್ದಿರಿಸುವ ಭಕ್ತರು http://online.tirupatibalaji.ap.gov.in/ ಅಧಿಕೃತ ವೆಬ್ಸೈಟ್ ನಲ್ಲಿ ಟಿಕೆಟ್ ಕಾಯ್ದಿರಿಸುವಂತೆ ತಿಳಿಸಲಾಗಿದೆ.