ಬೆಂಗಳೂರು: ಪಿಜಿ ನೀಟ್ ವೈದ್ಯಕೀಯ ಕೋರ್ಸ ಗಳ ಪ್ರವೇಶಕ್ಕೆ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಅಕ್ಟೋಬರ್ 7ರ ಮಧ್ಯಾಹ್ನ 2 ಗಂಟೆಗೆ ಕಾಲಾವಕಾಶ ವಿಸ್ತರಿಸಲಾಗಿದೆ.
ನೋಂದಣಿ ಮಾಡದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. ದಾಖಲೆಗಳ ಪರಿಶೀಲನೆಗೆ ಅಕ್ಟೋಬರ್ 7ರಿಂದ 18ರವರೆಗೆ ಆವಕಾಶ ಕಲ್ಪಿಸಲಾಗಿದೆ.
PG NEET ವೈದ್ಯಕೀಯ ಕೋರ್ಸ್ ಗಳಿಗೆ ಆನ್ ಲೈನ್ ಮೂಲಕ ನೋಂದಣಿ ಮಾಡಲು ಅ.7ರ ಮಧ್ಯಾಹ್ನ 2ಗಂಟೆವರೆಗೆ ಅವಕಾಶ ನೀಡಲಾಗಿದೆ. ಈಗಾಗಲೇ ಸಲ್ಲಿಸಿರುವ ಅರ್ಜಿಗಳಲ್ಲಿನ ದೋಷಗಳ ತಿದ್ದುಪಡಿಗೆ ಅ.7ರ ಸಂಜೆ 6ರವರೆಗೆ ಅವಕಾಶ ನೀಡಲಾಗಿದೆ. ಇದರ ಉಪಯೋಗವನ್ನು ಅಭ್ಯರ್ಥಿಗಳು ಪಡೆಯಬಹುದು.
PG NEET- 24 ಪ್ರವೇಶ ಪರೀಕ್ಷೆಯಲ್ಲಿ ಅರ್ಹರಾದ ಹಾಗೂ ಪಿಜಿ ಕೋರ್ಸ್ ಗೆ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿರುವ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಅ.7- 18ರವರೆಗೆ ಇಲ್ಲಿನ KEA ಕಚೇರಿಯಲ್ಲಿ ಮಾಡಲಾಗುತ್ತದೆ. UGNEET Rank ಆಧಾರದ ಮೇಲೆ ಪರಿಶೀಲನೆ ನಡೆಯಲಿದೆ. ವಿವರಗಳಿಗೆ ವೆಬ್ ಸೈಟ್ ಗೆ ಭೇಟಿ ನೀಡಬಹುದು.