
ದಾವಣಗೆರೆ: ಹೆಚ್ಚು ಹಣ ಗಳಿಸುವ ಆಸೆಗೆ ಆನ್ ಲೈನ್ ನಲ್ಲಿ ಹಣ ಹೂಡಿಕೆ ಮಾಡಿದ್ದ ಶಿಕ್ಷಕ ಬರೋಬ್ಬರಿ 91.90 ಲಲ್ಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ವಾಟ್ಸಪ್ ಗೆ ಬಂದಿದ್ದ ಎನ್ ಜಿಸಿ (ನ್ಯೂಮೌಂಟ್ ಗೋಲ್ಡ್ ಕ್ಯಾಪಿಟಲ್) ವೆಬ್ ಸೈಟ್ ಲಿಂಕ್ ಕ್ಲಿಕ್ ಮಾಡಿದಾಗ ಶಿಕ್ಷಕನಿಗೆ ಐದು ಅಮೆರಿಕಾ ಟ್ರೇಡಿಂಗ್ ಮತ್ತು ಮೈನಿಂಗ್ ಕಂಪನಿ ಎಂಬ ಹೆಸರಲ್ಲಿ ವಂಚನೆ ಮಾಡಲಾಗಿದೆ. ಈ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಹಣ ಗಳಿಸಬಹುದು ಎಂದು ನಂಬಿಸಲಾಗಿದೆ.
ವಂಚಕರು ಶಿಕ್ಷಕನಿಂದ ಮಾಹಿತಿ ಪಡೆದು, ಆನ್ ಲೈನ್ ನಲ್ಲಿಯೇ ಅಕೌಂಟ್ ಓಪನ್ ಮಾಡಿ ಹಣ ಹಾಕಿಸಿಕೊಂಡಿದ್ದಾರೆ. ಶಿಕ್ಷಕ ಹಣ ಹಾಕಿದ ಬಳಿಕ 27.40 ಲಕ್ಷ ಹಣ ಬಿಡಿಸಿಕೊಳ್ಳಲು ಹೋದಾಗ ಅಕೌಂಟ್ ಲಾಕ್ ಆಗಿದ್ದು, 27.40 ಲಕ್ಷ ರೂ ಎಕ್ಸ್ ಚೇಂಜ್ ಫ್ರೀ ಹೇಳಿದ್ದರಿಂದ ಹಣ ತುಂಬುವಂತೆ ಹೇಳಿ ಶಿಕ್ಷಕನ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಬಳಿಕ ನಿಮ್ಮ ಅಕೌಂಟ್ ನಲ್ಲಿ 2ಕೋಟಿ ಹಣವಿದೆ. ವಿತ್ ಡ್ರಾ ಮಾಡಬೇಕೆಂದರೆ 47.29 ಲಕ್ಷ ಹಣ ಪಾವತಿ ಮಾಡಬೇಕು ಎಂದು ಮತ್ತೆ ಸಂದೇಶ ಕಳುಹಿಸಿದ್ದಾರೆ. 2 ಕೋಟಿ ಹಣದ ಆಸೆಗೆ ಶಿಕ್ಷಕ ಮತ್ತೆ ಹಣ ತುಂಬಿದ್ದಾರೆ. ಆದರೆ ಹಣ ಬಾರದೇ ಇದ್ದಾಗ ಇದೊಂದು ವಂಚನೆ ಜಾಲ ಎಂಬುದು ಗೊತ್ತಾಗಿದೆ.
ತಕ್ಷಣ ಶಿಕ್ಷಕ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.