ಆನ್ಲೈನ್ ಗೇಮಿಂಗ್‌ನಲ್ಲಿ 100 ರೂ.ಗಿಂತ ಕಡಿಮೆ ಬಹುಮಾನ ಗೆದ್ದಲ್ಲಿ ಅವುಗಳ ಮೇಲೆ ಮೂಲದಲ್ಲಿ ತೆರಿಗೆ ಕಡಿತ (ಟಿಡಿಎಸ್) ಅನ್ವಯವಾಗುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಏಪ್ರಿಲ್ 1, 2023ರಿಂದ ಅನ್ವಯವಾಗುವಂತೆ, ಆದಾಯ ತೆರಿಗೆ ಕಾಯಿದೆ, 1961ಕ್ಕೆ ಹೊಸ ಸೆಕ್ಷನ್ 194BA ಸೇರಿಸಿರುವ 2023ರ ವಿತ್ತೀಯ ಕಾಯಿದೆಯು ಆನ್ಲೈನ್ ಗೇಮಿಂಗ್‌ನಲ್ಲಿ ಗೆಲ್ಲುವ ಬಹುಮಾನದ ಮೊತ್ತದ ಮೇಲೆ ತೆರಿಗೆ ವಿಧಿಸುವ ಕಾನೂನು ತಂದಿದೆ.
ಇದೇ ವೇಳೆ, 100 ರೂ.ಗಿಂತ ಮೇಲ್ಪಟ್ಟ ಬಹುಮಾನದ ಮೇಲೆ ಟಿಡಿಎಸ್ ಅನ್ವಯವಾಗಲಿದೆ. ಬಹುಮಾನದ ಮೊತ್ತವನ್ನು ಹಿಂಪಡೆಯುವ ವೇಳೆ, ಅದೇ ತಿಂಗಳು ಅಥವಾ ಮುಂದಿನ ತಿಂಗಳು, ಅಥವಾ ಹಿಂಪಡೆಯದೇ ಹಾಗೆಯೇ ಬಿಟ್ಟಲ್ಲಿ ವಿತ್ತೀಯ ವರ್ಷದ ಕೊನೆಯಲ್ಲಿ ಟಿಡಿಎಸ್ ಮೊತ್ತವು ಕಡಿತವಾಗಲಿದೆ.