
ತುಮಕೂರು: ಆನ್ ಲೈನ್ ಗೇಮ್ ಗೀಳಿಗೆ ಬಿದ್ದಿದ ಯುವಕನೊಬ್ಬ 20 ಸಾವಿರ ರೂಪಾಯಿ ಕಳೆದುಕೊಂಡಿದ್ದು, ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಟಿ.ಎಸ್.ಭರತ್ (24) ಮೃತ ಯುವಕ. ಇತ್ತೀಚೆಗಷೇ ಯುವಕ ಆನ್ ಲೈನ್ ಗೇಮ್ ನಿಂದ 20 ಸಾವಿರ ರೂಪಾಯಿ ಕಳೆದುಕೊಂಡಿದ್ದ. ವಿಷಯ ಗೊತ್ತಾಗಿ ಯುವಕನ ತಾಯಿ, ಆನ್ ಲೈನ್ ಗೇಮ್ ಆಡಬೇಡ ಎಂದು ಬುದ್ಧಿ ಹೇಳಿದ್ದರಂತೆ.
ಇದಕ್ಕೆ ಮನನೊಂದ ಯುವಕ ತನ್ನ ಮನೆ ಬಳಿಯೇ ಇರುವ ಹಳೆ ಹೆಂಚಿನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.